ಭಾರತದಲ್ಲಿ ಕೊರೋನಾಗೆ 8ನೇ ಬಲಿ..? 2 ದಿನದಲ್ಲಿ 4 ಸಾವು..?

masthmagaa.com:

ಮಹಾರಾಷ್ಟ್ರ: ಭಾರತದಲ್ಲಿ ಕೊರೋನಾ ವೈರಸ್​​​ಗೆ ಬಲಿಯಾದವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಇದೀಗ ಮುಂಬೈನಲ್ಲಿ ಕೊರೋನಾ ವೈರಸ್​​​ಗೆ ತುತ್ತಾಗಿದ್ದ 68 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಫಿಲಿಪೈನ್ಸ್​​ ಮೂಲದ ವ್ಯಕ್ತಿಯೊಬ್ಬರು ಮಾರ್ಚ್​ 13ರಂದು ಡಯಾಬಿಟಿಸ್ ಮತ್ತು ಅಸ್ತಮಾ ಸಮಸ್ಯೆ ಹಿನ್ನೆಲೆಯಲ್ಲಿ ಕಸ್ತೂರಬಾ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಉಸಿರಾಟದ ಸಮಸ್ಯೆ ಕೂಡ ಇತ್ತು. ನಂತರದಲ್ಲಿ ಕೊರೋನಾ ವೈರಸ್ ಪತ್ತೆಯಾಗಿತ್ತು. ಕಸ್ತೂರಬಾ ಆಸ್ಪತ್ರೆಯಲ್ಲಿ ಹಲವು ದಿನಗಳ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು.

ನಂತರದಲ್ಲಿ ಇವರು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು. ಆದ್ರೆ ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಈ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆದ್ರೆ ಇವರು ಕೊರೋನಾ ವೈರಸ್​​ನಿಂದ ಸಾವನ್ನಪ್ಪಿದ್ದಾರಾ ಅಥವಾ ಬೇರೆ ಸಮಸ್ಯೆಯಿಂದ ಮೃತಪಟ್ಟಿದ್ದಾರಾ ಅನ್ನೋ ಬಗ್ಗೆ ಸರ್ಕಾರ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.

-masthmagaa.com

Contact Us for Advertisement

Leave a Reply