masthmagaa.com:

ಕೊರೋನಾ ಹಾವಳಿ ಹಿನ್ನೆಲೆ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯನ್ನೇ ಮುಂದೂಡಿಕೆ ಮಾಡಲಾಗಿದೆ. ಈ ನಿರ್ಧಾರವನ್ನ ಇಂಗ್ಲೆಂಡ್ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್ (ECB) ಹಾಗೂ ಕ್ರಿಕೆಟ್​ ಸೌತ್ ಆಫ್ರಿಕಾ (CSA) ಜಂಟಿಯಾಗಿ ತೆಗೆದುಕೊಂಡಿದೆ. ಸರಣಿ ಯಾವಾಗ ಆರಂಭವಾಗುತ್ತೆ ಅನ್ನೋದನ್ನ ಕೂಡ ಈ ಮಂಡಳಿಗಳು ಚರ್ಚಿಸಿ ತೀರ್ಮಾನ ಕೈಗೊಳ್ಳಲಿವೆ. ಹೀಗಾಗಿ ಸೌತ್ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ತಂಡದ ಆಟಗಾರರು ವಾಪಸ್ ತವರಿಗೆ ಹಾರಾಟ ನಡೆಸಲಿದ್ದಾರೆ.

ಅಂದ್ಹಾಗೆ ಡಿಸೆಂಬರ್ 4ರಂದು ದಕ್ಷಿಣ ಆಫ್ರಿಕಾದ ಓರ್ವ ಆಟಗಾರನಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಅಂದು ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯವನ್ನ ಕೊನೇ ಕ್ಷಣದಲ್ಲಿ ಮುಂದೂಡಲಾಗಿತ್ತು. ಬಳಿಕ ಭಾನುವಾರ ಆಟಗಾರರು ತಂಗಿದ್ದ ಹೋಟೆಲ್​ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಮೊದಲ ಮ್ಯಾಚನ್ನೇ ರದ್ದು ಮಾಡಲಾಗಿತ್ತು. ಇದೀಗ ಇಡೀ ಸರಣಿಯನ್ನೇ ಪೋಸ್ಟ್​ಪೋನ್ ಮಾಡಲಾಗಿದೆ. ಯಾವ ಆಟಗಾರನಿಗೆ ಕೊರೋನಾ ಪಾಸಿಟಿವ್ ಬಂದಿದೆ ಅನ್ನೋ ಗುಟ್ಟು ಇನ್ನೂ ರಟ್ಟಾಗಿಲ್ಲ.

-masthmagaa.com

Contact Us for Advertisement

Leave a Reply