ಕೇರಳದ 18 ಅಚ್ಚರಿಯ ಸಂಗತಿಗಳು…ಓದಲೇಬೇಕು

ಹಾಯ್ ಫ್ರೆಂಡ್ಸ್, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತಾರೆ. ಈ ಮಾತು ನಮ್ಮ ಪಕ್ಕದ ರಾಜ್ಯ ಕೇರಳಕ್ಕೆ ಸರಿಯಾಗಿ ಸೂಟ್ ಆಗುತ್ತೆ. ಅದಕ್ಕೆ ಸಾಕಷ್ಟು ಕಾರಣಗಳಿವೆ. ಇಂಥ ಕೇರಳಕ್ಕೆ ದೇವರನಾಡು ಅಂತ ಕರೆಯೋದು ಯಾಕೆ..? ಕೇರಳದ 18 ವಿಶೇಷತೆ ಹಾಗೂ ಸತ್ಯಸಂಗತಿಗಳನ್ನ ಹೇಳ್ತಾ ಹೋಗ್ತೀವಿ  ನೋಡಿ.

ನಂಬರ್ 1
ಅತ್ಯಧಿಕ ಸಾಕ್ಷರತಾ ಪ್ರಮಾಣ
ಹೌದು ಫ್ರೆಂಡ್ಸ್ ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತಾ ಪ್ರಮಾಣ ಹೊಂದಿರುವ ರಾಜ್ಯ ಕೇರಳ. ಬರಿ ಅಷ್ಟೇ ಅಲ್ಲ ಅತಿ ಹೆಚ್ಚು ಜೀವಿತಾವಧಿ, ಅತಿ ಹೆಚ್ಚು ಲಿಂಗಾನುಪಾತ, ಅತಿ ಹೆಚ್ಚು ಮಾನವ ಅಭಿವೃದ್ಧಿ ಸೂಚ್ಯಂಕ ಹಾಗೂ ಕಡಿಮೆ ಜನಸಂಖ್ಯಾ ಬೆಳವಣಿಗೆ ದರ ಹೊಂದಿರುವ ರಾಜ್ಯ ಕೇರಳ.

ನಂಬರ್ 2
ಅತಿ ಕಡಿಮೆ ಭ್ರಷ್ಟಾಚಾರ
ಹೌದು ಫ್ರೆಂಡ್ಸ್ ಟ್ರಾನ್ಸ್ಫರಸಿ ಇಂಡಿಯಾ ಸರ್ವೆ ಪ್ರಕಾರ ಭಾರತದಲ್ಲಿ ಅತಿ ಕಡಿಮೆ ಭ್ರಷ್ಟಾಚಾರ ತಾಂಡವವಾಡುತ್ತಿರುವ ರಾಜ್ಯ ಅಂದ್ರೆ ಅದು ಕೇರಳ.

ನಂಬರ್ 3
ದೇವರ ಸ್ವಂತ ನಾಡು
ಫ್ರೆಂಡ್ಸ್ ಕೇರಳವನ್ನ ದೇವರನಾಡು, ದೇವರ ಸ್ವಂತ ನಾಡು ಅಂತಾರೆ. ಈ ಹೆಸರು ಯಾಕೆ ಬಂತು ಅಂತ ಸಾಕಷ್ಟು ಜನರಿಗೆ ಗೊತ್ತಿಲ್ಲ. ಅಂದಹಾಗೆ ದೇವರ ಸ್ವಂತ ನಾಡು ಅನ್ನೋದು ಕೇರಳ ಪ್ರವಾಸೋದ್ಯಮ ಇಲಾಖೆಯ ಸ್ಲೋಗನ್. ಈ ಸ್ಲೋಗನ್ ಮೂಲಕವೇ ಟೂರಿಸಮ್ ಇಲಾಖೆ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತೆ.

ನಂಬರ್ 4
ಅತಿ ಹೆಚ್ಚು ರಬ್ಬರ್ ಬೆಳೆಯುವ ರಾಜ್ಯ
ಫ್ರೆಂಡ್ಸ್ ಜಗತ್ತಿನಲ್ಲಿ ಅತಿ ಹೆಚ್ಚು ರಬ್ಬರ್ ಬೆಳೆಯುವ ನಾಲ್ಕನೇ ರಾಷ್ಟ್ರ ಭಾರತ. ನಮ್ಮ ದೇಶದಲ್ಲಿ ಕೇರಳ ಒಂದರಲ್ಲೇ ಬರೋಬ್ಬರಿ 90% ನಷ್ಟು ರಬ್ಬರ್ ಬೆಳೆಯಲಾಗುತ್ತೆ.

ನಂಬರ್ 5
ಮಾಧ್ಯಮಕ್ಕೆ ಹೆಚ್ಚು ಮಾನ್ಯತೆ
ಹಾಯ್ ಫ್ರೆಂಡ್ಸ್ ಕೇರಳದಲ್ಲಿ ನ್ಯೂಸ್ ಪೇಪರ್ ಗಳು 9ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಟವಾಗುತ್ತವೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಮಾಧ್ಯಮ ಮಾನ್ಯತೆ ಹೊಂದಿರುವ ರಾಜ್ಯ ಎನಿಸಿಕೊಂಡಿದೆ.

ನಂಬರ್ 6
ಒಂದು ಕೇರಳ.. ಮೂರು ಭಾಗ
ಕೇರಳವನ್ನ ಭೌಗೋಳಿಕವಾಗಿ ಮೂರು ಪ್ರವಾಸಿ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಉತ್ತರ ಕೇರಳವನ್ನ ಮಲಬಾರ್ ಎಂದು.. ಮಧ್ಯ ಕೇರಳವನ್ನ ಕೊಚ್ಚಿ ಎಂದು.. ದಕ್ಷಿಣ ಕೇರಳವನ್ನ ಟ್ರಾವಂಕೂರ್ ಎಂದು ಕರೆಯಲಾಗುತ್ತೆ.

ನಂಬರ್ 7
ಧೋತಿ ಮತ್ತು ಮೀಸೆ
ಫ್ರೆಂಡ್ಸ್ ಧೋತಿ ಅಥವಾ ಪಂಚೆ ಮಲಯಾಳಿ ಪುರುಷರು ಹಾಗೂ ಯುವಕರ ಸಾಂಪ್ರದಾಯಿಕ ಉಡುಗೆಯಾಗಿದೆ. ಜೊತೆಗೆ ಮಲಯಾಳಿ ಪುರುಷರು ಮೀಸೆ ಬಿಡುತ್ತಾರೆ.

ನಂಬರ್ 8
ಎಲ್ಲಿ ನೋಡಿದ್ರೂ ತೆಂಗಿನ ಮರ
ಹೌದು ಕೇರಳದಲ್ಲಿ ಹೆಚ್ಚು ತೆಂಗಿನ ಕಾಯಿಯನ್ನ ಬೆಳೆಯುತ್ತಾರೆ. ಹೀಗಾಗಿ ನೀವು ಹೋದಲ್ಲೆಲ್ಲ ತೆಂಗಿನ ಮರಗಳು ಕಾಣಸಿಗುತ್ತವೆ. ಇನ್ನೊಂದು ವಿಚಾರ ಅಂದ್ರೆ ಸರ್ಕಾರವೇ ಇಲ್ಲಿ ತೆಂಗಿನ ಮರಗಳಗಣತಿ ನಡೆಸುತ್ತೆ.

ನಂಬರ್ 9
ಅಪ್ರತಿಮ ಆನೆಗಳು
ಫ್ರೆಂಡ್ಸ್ ಕೇರಳದಲ್ಲಿ ಆನೆಗಳನ್ನು ಹೆಚ್ಚಾಗಿ ಸಾಕುತ್ತಾರೆ. ಕೆಲವೊಂದು ಆನೆಗಳು ದೇವಸ್ಥಾನಗಳ ಒಡೆತನದಲ್ಲಿದ್ರೆ.. ಇನ್ನೂ ಕೆಲವೊಂದು ಆನೆಗಳು ಶ್ರೀಮಂತರ ಒಡೆತನದಲ್ಲಿವೆ.. ಇಂತಹ ಆನೆಗಳನ್ನು ಹೆಚ್ಚಾಗಿ ದೇವಸ್ಥಾನಗಳಲ್ಲಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಲಾಗುತ್ತೆ. ಇನ್ನೊಂದು ವಿಚಾರ ಅಂದ್ರೆ ಆನೆ ಕೇರಳದ ರಾಜ್ಯ ಪ್ರಾಣಿ ಕೂಡ ಹೌದು.

ನಂಬರ್ 10
ಮೊದಲ ಮಳೆಯ ಸಿಂಚನ
ಫ್ರೆಂಡ್ಸ್ ಮಳೆಗಾಲದ ಮೊದಲು ಹನಿ ಬೀಳುವುದು ಕೇರಳದಲ್ಲಿ. ಪ್ರತಿವರ್ಷ ಜೂನ್ ಮೊದಲ ವಾರದಲ್ಲಿ ನೈರುತ್ಯ ಮಾನ್ಸುನ್ ಕೇರಳವನ್ನ ತಲುಪುತ್ತೆ. ಸುಮಾರು 10 ದಿನಗಳ ನಂತರ ಅದು ಮುಂಬೈ ತಲುಪುತ್ತೆ. ಜೂನ್ ಅಂತ್ಯದ ವೇಳೆಗೆ ದೆಹಲಿ ತಲುಪಿ ಬಳಿಕ ದೇಶದ ಉಳಿದ ಭಾಗಗಳನ್ನ ತಲುಪುತ್ತದೆ.

ನಂಬರ್ 11
ವಿಶ್ವದ ಮಸಾಲೆ ರಾಜಧಾನಿ
ಕೇರಳದಲ್ಲಿ ಹೆಚ್ಚು ಮಸಾಲೆ ಪದಾರ್ಥಗಳನ್ನು ಬೆಳೆಯುತ್ತಾರೆ. ಕೇರಳದಲ್ಲಿ ನೀವು ಸುತ್ತಾಡಿದರೆ ಅದರ ಸುವಾಸನೆ ನಿಮ್ಮ ಮೂಗಿಗೆ ಬಡಿಯುತ್ತೆ. ಹೀಗಾಗಿಯೇ ಕೇರಳವನ್ನು ವಿಶ್ವದ ಮಸಾಲೆ ರಾಜಧಾನಿ ಎನ್ನುತ್ತಾರೆ. ವಾಸ್ತವದಲ್ಲಿ ಕ್ರಿಸ್ತಪೂರ್ವ 3000 ವರ್ಷಗಳ ಹಿಂದಿನಿಂದಲೂ ಮಸಾಲೆ ಪದಾರ್ಥಗಳನ್ನ ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಕೆಲವನ್ನು ಭಾರತದ ಮಸಾಲೆ ಉದ್ಯಾನ ಅಂತ ಕರೀತಾರೆ.

ನಂಬರ್ 12
ಅತ್ಯಂತ ಹಳೆಯ ತೇಗದ ಮರಗಳು
ಫ್ರೆಂಡ್ಸ್ ಜಗತ್ತಿನ ಅತ್ಯಂತ ಹಳೆಯ ಎರಡು ತೇಗದ ಮರಗಳು ಕೇರಳದಲ್ಲಿವೆ. ಮಲಪುರಂ ಪಟ್ಟಣದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಪ್ಲಾಂಟೇಶನ್ ಒಂದರಲ್ಲಿ ಈ ಮರಗಳಿವೆ. ದುರದೃಷ್ಟ ಅಂದ್ರೆ ಈ ಮರಗಳು ಸಾವಿನ ಅಂಚಿನಲ್ಲಿವೆ.

ನಂಬರ್ 13
ಹೆಚ್ಚು ರಸ್ತೆ ಅಪಘಾತಗಳು
ಫ್ರೆಂಡ್ಸ್ ಕರ್ನಾಟಕದಂತೆ ಕೇರಳ ಕೂಡ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ರಾಜ್ಯಗಳಲ್ಲಿ ಒಂದು. ದೇಶದಲ್ಲಿ 2000ನೆ ಇಸವಿಯಲ್ಲಿ ಕೇರಳದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ನಡೆದಿದ್ದವು.

ನಂಬರ್ 14
ಪುರುಷರಿಗಿಂತ ಮಹಿಳೆಯರೇ ಹೆಚ್ಚು
ಹೌದು ಫ್ರೆಂಡ್ಸ್ ಕೇರಳದಲ್ಲಿ ಸಾವಿರ ಪುರುಷರಿಗೆ ಸಾವಿರದ 84 ಮಹಿಳೆಯರಿದ್ದಾರೆ. ಈ ಲಿಂಗಾನುಪಾತ ದೇಶದ ಉಳಿದ ರಾಜ್ಯಗಳಿಗಿಂತ ಹೆಚ್ಚು.

ನಂಬರ್ 15
ದೇಶದ ಮೊದಲ ಡಿಜಿಟಲ್ ರಾಜ್ಯ
2015ರಲ್ಲಿ ಕೇರಳಕ್ಕೆ ಭಾರತದ ಮೊದಲ ಕಂಪ್ಲೀಟ್ ಡಿಜಿಟಲ್ ಸ್ಟೇಟ್ ಅನ್ನೋ ಗೌರವ ಸಿಕ್ಕಿತು. ಇ-ಆಡಳಿತ ವ್ಯವಸ್ಥೆ ಅನುಷ್ಠಾನದಲ್ಲಿ ರಾಜ್ಯವು ಗಮನಾರ್ಹ ಸಾಧನೆ ಮಾಡಿದ್ದರಿಂದ ಕೇರಳದ ಕಿರೀಟಕ್ಕೆ ಮತ್ತೊಂದು ಗರಿ ಬಂತು.

ನಂಬರ್ 16
ಬಡವರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆ
ಫ್ರೆಂಡ್ಸ್ ಕೇರಳದಲ್ಲಿ ಬಡ ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತೆ. 2014ರಲ್ಲಿ ಇಂಥಾ ಯೋಜನೆಯನ್ನ ಪ್ರಾರಂಭಿಸಿದ ದೇಶದ ಮೊದಲ ರಾಜ್ಯವಾಯಿತು ಕೇರಳ.

ನಂಬರ್ 17
ಜೀರೋ ಹೋಮ್ ಲೆಸ್ ಸ್ಟೇಟ್
ಹೌದು ಫ್ರೆಂಡ್ಸ್ ಕೇರಳ ಜೀರೋ ಹೋಮ್ ಲೆಸ್ ಸ್ಟೇಟ್ ಅನ್ನೋ ಖ್ಯಾತಿ ಗಳಿಸಿದೆ. ಅಂದ್ರೆ ಬಹುತೇಕ ಎಲ್ಲರಿಗೂ ಮನೆ ಇದೆ. ಕೇವಲ ಝೀರೋ ಪಾಯಿಂಟ್ ಝೀರೋ ಫೋರ್ ಪರ್ಸೆಂಟ್ ನಷ್ಟು ಜನ ಮಾತ್ರ ಮನೆ ಇಲ್ಲದೆ ವಾಸಿಸುತ್ತಿದ್ದಾರೆ.

ನಂಬರ್ 18
ಶತಮಾನದ ಪ್ರವಾಹ
ಫ್ರೆಂಡ್ಸ್ 2018ರಲ್ಲಿ ಕೇರಳದಲ್ಲಿ ಸಂಭವಿಸಿದ ಪ್ರವಾಹ ಶತಮಾನದ ಲ್ಲೇ ಭೀಕರ ಪ್ರವಾಹ ಎನಿಸಿಕೊಂಡಿದೆ. ಪ್ರವಾಹದಲ್ಲಿ 350ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು, ಸಾವಿರಾರು ಮನೆಗಳು ಕುಸಿದು ಬಿದ್ದವು.. ಹತ್ತು ಸಾವಿರ ಕಿಲೋಮೀಟರ್ ಹೆಚ್ಚು ರಸ್ತೆಗಳು ಕೊಚ್ಚಿಹೋದ ವು.

ಫ್ರೆಂಡ್ಸ್ ಇದಿಷ್ಟೂ ದೇವರನಾಡು, ಬುದ್ಧಿವಂತರ ರಾಜ್ಯ ಹೀಗೆ ನಾನಾ ವಿಶೇಷತೆಗಳನ್ನ ಹೊಂದಿರುವ ನಮ್ಮ ಪಕ್ಕದ ರಾಜ್ಯ ಕೇರಳದ ಬಗ್ಗೆ ತಿಳಿಸಿಕೊಡುವ ಪ್ರಯತ್ನ.

Contact Us for Advertisement

Leave a Reply