ಗಣರಾಜ್ಯೋತ್ಸವ ಮುಖ್ಯಅತಿಥಿಯಾಗಿ ಬೋರಿಸ್ ಜಾನ್ಸನ್ ಬರೋದು ಡೌಟು..!

masthmagaa.com:

ದೆಹಲಿ: ಜನವರಿಯ ಗಣರಾಜ್ಯೋತ್ಸವಕ್ಕೆ ಈ ಬಾರಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಕರೆಯಲಾಗಿತ್ತು. ಆದ್ರೀಗ ಅವರು ಭಾರತಕ್ಕೆ ಬರೋದು ಅನುಮಾನ.. ಯಾಕಂದ್ರೆ ಬ್ರಿಟನ್​​ನಲ್ಲಿ ಈಗಾಗಲೇ ಹೊಸ ಕೊರೋನಾ ಪತ್ತೆಯಾಗಿರೋದು ವಿಶ್ವವನ್ನೇ ಆತಂಕಕ್ಕೀಡು ಮಾಡಿದೆ. ಹೀಗಾಗಿ ಅವರು ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಕಡಿಮೆ ಅಂತ ನಿನ್ನೆಯಷ್ಟೇ ಬ್ರಿಟಿಷ್ ಮೆಡಿಕಲ್ ಅಸೋಸಿಯೇಷನ್​​ನ ಮುಖ್ಯಸ್ಥ ಚಾಂದ್ ನಾಗ್​​ಪೌಲ್ ಹೇಳಿದ್ರು.

ಅದೇ ರೀತಿ ಸಾಮಾಜಿಕ ಜಾಲತಾಣದಲ್ಲೂ ಭಾರತೀಯರಿಂದ ಕ್ಯಾಂಪೇನ್ ಶುರು ಮಾಡಲಾಗ್ತಿದೆ. ಕಳೆದ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬಂದು ಹೋದ ಬಳಿಕ ಕೊರೋನಾ ಶುರುವಾಯ್ತು. ಅದೇ ರೀತಿ ಈಗ ಬ್ರಿಟನ್ ಪ್ರಧಾನಿ ಬಂದು ಹೊಸ ಕೊರೋನಾ ಶುರುವಾಗೋದು ಬೇಡ ಅಂತ ಕಿಡಿಕಾರುತ್ತಿದ್ದಾರೆ.

ಈ ನಡುವೆ ರೈತ ಸಂಘಗಳು ಕೂಡ ಬ್ರಿಟಿಷ್-ಪಂಜಾಬಿ ನಾಯಕರಿಗೆ ಪತ್ರ ಬರೆದಿದ್ದು, ಬೋರಿಸ್ ಜಾನ್ಸನ್ ಆಗಮನವನ್ನು ವಿರೋಧಿಸಿದ್ಧಾರೆ. ಜೊತೆಗೆ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ವಾಪಸ್ ಪಡೆಯದೇ ಇದ್ದರೆ ಗಣರಾಜ್ಯೋತ್ಸವ ಅತಿಥಿಯಾಗಿ ಬೋರಿಸ್ ಜಾನ್ಸನ್ ಭಾರತಕ್ಕೆ ಬರದಂತೆ ಮನವಿ ಮಾಡಿ ಅಂತ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply