24 ಗಂಟೆಯಲ್ಲಿ ಮತ್ತೋರ್ವ ಪಿಎಂಸಿ ಬ್ಯಾಂಕ್​ ಗ್ರಾಹಕ ಸಾವು..!

ಮಹಾರಾಷ್ಟ್ರ: ಪಿಎಂಸಿ(ಪಂಜಾಬ್ & ಮಹಾರಾಷ್ಟ್ರ ಕೋ ಆಪರೇಟಿವ್) ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದ ಮತ್ತೋರ್ವ ಗ್ರಾಹಕ ಸಾವನ್ನಪ್ಪಿದ್ದಾರೆ. 59 ವರ್ಷದ ಫತ್ತೇಮಲ್ ಪಂಜಾಬಿ ಎಂಬುವವರು ಹಾರ್ಟ್​​ ಅಟ್ಯಾಗಿ ಆಗಿ ಸಾವನ್ನಪ್ಪಿದ್ದಾರೆ. ಈ ಮೂಲಕ 24 ಗಂಟೆಯಲ್ಲಿ ಇಬ್ಬರು ಪಿಎಂಸಿ ಬ್ಯಾಂಕ್ ಗ್ರಾಹಕರು ಸಾವನ್ನಪ್ಪಿದಂತಾಗಿದೆ.

ಇದಕ್ಕೂ ಮುನ್ನ ಓಶಿವಾರಾದಲ್ಲಿ ಸಂಜಯ್ ಗುಲಾಟಿ ಎಂಬುವವರು ಸಾವನ್ನಪ್ಪಿದ್ದರು. ಸೋಮವಾರ ಪಿಎಂಸಿ ಬ್ಯಾಂಕ್ ವಿರುದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಜಯ್ ಗುಲಾಟಿ, ಮನೆಗೆ ಬಂದ ನಂತರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಈ ಹಿಂದೆ ಜೆಟ್​ ಏರ್​​ವೇಸ್​​ನಲ್ಲಿ ಕೆಲಸ ಮಾಡುತ್ತಿದ್ದ ಇವರನ್ನು ಇತ್ತೀಚೆಗಷ್ಟೇ ಕೆಲಸದಿಂದ ತೆಗೆಯಲಾಗಿತ್ತು. ಇವರ ಪುತ್ರ ದಿವ್ಯಾಂಗನಾಗಿದ್ದು, ಆತನ ಚಿಕಿತ್ಸೆಗಾಗಿ 90 ಲಕ್ಷ ರೂಪಾಯಿ ಬ್ಯಾಂಕ್​​ನಲ್ಲಿ ಇಟ್ಟಿದ್ದರು. ಆದ್ರೆ ಈಗ ಆ ಹಣ ತೆಗೆಯಲು ಸಾಧ್ಯವಾಗುತ್ತಿಲ್ಲ.

35 ವರ್ಷ ಹಳೆಯ ಈ ಬ್ಯಾಂಕ್​​ನಲ್ಲಿ ಸಾವಿರಾರು ಗ್ರಾಹಕರ ಹಣ ಇದೆ. ಆದ್ರೆ ಈಗ ಬ್ಯಾಂಕ್​​ನಿಂದ ಹಣ ತೆಗೆಯಲು ಸಾಧ್ಯವಾಗುತ್ತಿಲ್ಲ. ಸದ್ಯ ಬ್ಯಾಂಕ್​​ನಲ್ಲಿ ಗ್ರಾಹಕರ 11 ಸಾವಿರದ 617 ಕೋಟಿ ರೂಪಾಯಿ ಜಮೆಯಾಗಿದೆ. ಆದ್ರೆ ಈಗ ಹಗರಣ ನಡೆದಿರೋ ಶಂಕೆ ವ್ಯಕ್ತವಾಗಿದ್ದು ಬ್ಯಾಂಕ್​ನಿಂದ ಹಣ ತೆಗೆಯಲು ಗ್ರಾಹಕರಿಗೆ ಸಾಧ್ಯವಾಗುತ್ತಿಲ್ಲ.

Contact Us for Advertisement

Leave a Reply