ಅರ್ಥವ್ಯವಸ್ಥೆ ಬಗ್ಗೆ ನಿರ್ಮಲಾ ಪತಿ ಕಳವಳ: ಏನ್ ಹೇಳಿದ್ರು ಗೊತ್ತಾ..?

ದೆಹಲಿ: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪತಿ ಪರಾಕಲಾ ಪ್ರಭಾಕರ್ ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ವಿರೋಧಿಸಿದ್ದಾರೆ. ಆಂಗ್ಲ ಪತ್ರಿಕೆಯೊಂದಕ್ಕೆ ಲೇಖನ ಬರೆದಿರುವ ಅವರು, ಭಾರತದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಆದ್ರೆ ಅದನ್ನು ಸರಿಪಡಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ. ಆದ್ರೆ ಈವರೆಗೆ ಕೇಂದ್ರ ಸರ್ಕಾರ ಈವರೆಗೆ ಯಾವುದೇ ರೋಡ್ ಮ್ಯಾಪ್​​ ತಯಾರಿಸಿಲ್ಲ ಎಂದು ಹೇಳಿದ್ದಾರೆ.

ಪ್ರಭಾಕರ್​ ಈ ಹಿಂದೆ ಆಂಧ್ರಪ್ರದೇಶ ಸರ್ಕಾರದ  ಸಾರಿಗೆ ಸಲಹೆಗಾರರಾಗಿ ಕೆಲಸ ಮಾಡಿದ್ದರು. ದೇಶದ ಅರ್ಥವ್ಯವಸ್ಥೆ ಸಂಕಷ್ಟದಲ್ಲಿಲ್ಲ. ಎಲ್ಲವೂ ಸರಿ ಇದೆ ಎಂದು ಸರ್ಕಾರ ಹೇಳಿದರೂ ಕೂಡ ಬೆಳಕಿಗೆ ಬರುತ್ತಿರೋ ಒಂದೊಂದೇ ಅಂಕಿ ಅಂಶಗಳನ್ನು ಗಮನಿಸಿದ್ರೆ ಸತ್ಯಾಂಶ ತಿಳಿಯುತ್ತೆ. ದೇಶದ ಒಂದೊಂದೇ ವಲಯಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದೆ. ಜಿಡಿಪಿ ದರ 6 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶೇ.5ಕ್ಕೆ ಇಳಿದಿದೆ. ನಿರುದ್ಯೋಗ ದರ ಶೇ.45 ತಲುಪಿದೆ.

ಕೇಂದ್ರ ಸರ್ಕಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಿ.ವಿ ನರಸಿಂಹ ರಾವ್ ಅವರ ಆರ್ಥಿಕ ನೀತಿಗಳನ್ನು ಅನುಸರಿಸಿದ್ರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Contact Us for Advertisement

Leave a Reply