ಆಸ್ಪತ್ರೆಯಲ್ಲಿ ಬೆಂಕಿ: 10 ಕೊರೋನಾ ಸೋಂಕಿತರು ಸಾವು!

masthmagaa.com:

ದೇಶದ ಮತ್ತೊಂದು ಕೊರೋನಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 10ಮಂದಿ ಮೃತಪಟ್ಟಿದ್ದಾರೆ. ಮುಂಬೈನ ಡ್ರೀಮ್ಸ್ ಮಾಲ್​ನ ಸನ್​ರೈಸ್ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ಅಗ್ನಿ ದುರಂತ ಸಂಭವಿಸಿದೆ. ತಕ್ಷಣ ಅಗ್ನಿಶಾಮಕ ವಾಹನ ಮತ್ತು ವಾಟರ್​ ಟ್ಯಾಂಕರ್​ಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕೆಲಸ ಮಾಡಿವೆ.

ಈ ವೇಳೆ ವೆಂಟಿಲೇಟರ್ ಸಪೋರ್ಟ್​ನಲ್ಲಿದ್ದ 7 ಮಂದಿ ಸೇರಿದಂತೆ ಒಟ್ಟು 76 ರೋಗಿಗಳನ್ನ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು. 76 ರೋಗಿಗಳಲ್ಲಿ 73 ಜನ ಕೊರೋನಾ ಸೋಂಕಿತರಾಗಿದ್ದರು ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಹಲವು ತಿಂಗಳಿಂದ ದೇಶದ ವಿವಿಧ ಭಾಗಗಳ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ ಸಂಭವಿಸುತ್ತಲೇ ಇವೆ.

-masthmagaa.com

Contact Us for Advertisement

Leave a Reply