ಅಮೆರಿಕಾದ ಇಬ್ಬರು ಸಂಸದರಿಗೂ ಕೊರೋನಾ..!

masthmagaa.com:

ವಿಶ್ವದಾದ್ಯಂತ 2 ಲಕ್ಷಕ್ಕೂ ಅಧಿಕ ಜನರನ್ನ ಹಿಂಡಿ ಹಿಪ್ಪೆ ಮಾಡ್ತಿರುವ ಚೀನಾ ಕಾಯಿಲೆ ಅಮೆರಿಕಾದಲ್ಲಿ ತನ್ನ ಹಾವಳಿ ಹೆಚ್ಚು ಮಾಡಿದೆ. ವಾಷಿಂಗ್ಟನ್ ಸೇರಿ 50 ರಾಜ್ಯಗಳ ಮೇಲೆ ದಾಳಿ ನಡೆಸಿರುವ ಕೊರೋನಾ 150 ಮಂದಿಯನ್ನ ಬಲಿ ಪಡೆದಿದೆ. 9 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದೀಗ  ಅಮೆರಿಕಾದ ಇಬ್ಬರು ಸಂಸದರಲ್ಲೂ ಕೊರೋನಾ ಕಾಯಿಲೆ ಪತ್ತೆಯಾಗಿದೆ. ಸಂಸದರಾದ ಮರಿಯೋ ಡಯಾಜ್​ ಬಲಾರ್ಟ್​​​, ಬೆನ್ ಮ್ಯಾಕ್​ಆಡಮ್ಸ್​​​ರಲ್ಲಿ ಕೊರೋನಾ ವೈರಸ್ ಲಕ್ಷಣಗಳು ಪತ್ತೆಯಾಗಿತ್ತು. ನಂತರ ಪರೀಕ್ಷೆ ನಡೆಸಿದಾಗ ಕೊರೋನಾ ವೈರಸ್ ಇರೋದು ಪತ್ತೆಯಾಗಿದೆ. ಹೀಗಾಗಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ  ನೀಡಲಾಗುತ್ತಿದೆ.

ಈಗಾಗಲೇ ದೊಡ್ಡಣ್ಣ ಕೂಡ ಕೊರೋನಾದಿಂದ ಬಂಧಿಯಾಗಿದ್ದು ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಲಾಗಿದೆ. ಇದರ ಗಂಭೀರತೆ ಅರಿತ ಅಧ್ಯಕ್ಷ ಡೊನಾಲ್ಡ್​​​ ಟ್ರಂಪ್ ಹೊರ ದೇಶಗಳಿಗೆ ವೀಸಾ ರದ್ದು ಮಾಡಿದ್ದಾರೆ. ಜೊತೆಗೆ ಅಮೆರಿಕಾದಲ್ಲಿ ಕೊರೋನಾ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ.

-masthmagaa.com

Contact Us for Advertisement

Leave a Reply