ಚೀನಾದಲ್ಲಿ ಕೊರೋನಾ ಔಷಧ ಪರೀಕ್ಷೆ ಸಕ್ಸಸ್​​..!

masthmagaa.com:

ಚೀನಾ ಕೊರೋನಾ ವೈರಸ್​ಗೆ ಕಂಡು ಹಿಡಿದ ಔಷಧವನ್ನು ಮಾರ್ಚ್​ 17ರಂದು ಕ್ಲಿನಿಕಲ್ ಟ್ರಯಲ್ ಶುರು ಮಾಡಿತ್ತು. ಇದೀಗ ಈ ಪರೀಕ್ಷೆಯಲ್ಲಿ ಚೀನಾಗೆ ಯಶಸ್ಸು ಸಿಕ್ಕಿದೆ. ಈ ಪರೀಕ್ಷೆಗೆ ಚೀನಾ 108 ಮಂದಿಯನ್ನು ಆಯ್ಕೆ ಮಾಡಿಕೊಂಡಿತ್ತು. ಇವರಲ್ಲಿ 14 ಮಂದಿ ವ್ಯಾಕ್ಸಿನ್ ಪರೀಕ್ಷಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇವರನ್ನು 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಇದೀಗ 14 ಮಂದಿ ಪರೀಕ್ಷಾ ಅವಧಿಯನ್ನು ಪೂರ್ಣಗೊಳಿಸಿ, ಆರೋಗ್ಯವಂತರಾಗಿ ತಮ್ಮ ತಮ್ಮ ಮನೆಗೆ ಹೋಗಿದ್ದಾರೆ. ವುಹಾನ್​ನಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು.

ಈ ವ್ಯಾಕ್ಸಿನ್​​ನ್ನು ಬಯೋ ವಾರ್​ಫೇರ್​​ ವಿಜ್ಞಾನಿ ಚೆನ್​ ವೀ ಮತ್ತು ಅವರ ತಂಡ ಸಿದ್ಧಪಡಿಸಿತ್ತು. ಪರೀಕ್ಷೆಗೆ ಒಳಗಾದವರೆಲ್ಲರೂ 18ರಿಂದ 60 ವರ್ಷ ಒಳಗಿನವರಾಗಿದ್ದಾರೆ. ಇವರನ್ನು 3 ಗುಂಪುಗಳಾಗಿ ವಿಂಗಡಿಸಿ ಒಬ್ಬೊಬ್ಬರಿಗೆ ಒಂದೊಂದು ಪ್ರಮಾಣದಲ್ಲಿ ವ್ಯಾಕ್ಸಿನ್ ನೀಡಲಾಯ್ತು. ನಂತರ ವುಹಾನ್​​ನ ಸ್ಪೆಷಲ್ ಸರ್ವೀಸ್ ಹೆಲ್ತ್ ಸೆಂಟರ್​​ನಲ್ಲಿ ಕ್ವಾರಂಟೈನ್​ನಲ್ಲಿಇಡಲಾಗಿತ್ತು.

ಈಗಾಗಲೇ ಪರೀಕ್ಷೆ ಪೂರ್ಣಗೊಳಿಸಿ ಮನೆಗೆ ತೆರಳಿರೋ 14 ಮಂದಿಯ ಮೇಲೆ ನಿಗಾ ಇಡಲಾಗಿದೆ. ಪ್ರತಿದಿನವೂ ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತೆ. ಅಲ್ಲದೆ 6 ತಿಂಗಳಲ್ಲಿ ಇವರಿಗೆ ಕೊರೋನಾ ಬಂದ್ರೆ ಇವರ ದೇಹ ಹೇಗೆ ಪ್ರತಿಕ್ರಿಯಿಸುತ್ತೆ ಅಂತ ತಿಳಿದು ಬರಲಿದೆ. ಒಂದ್ವೇಳೆ ಅವರ ದೇಹದಲ್ಲಿ ಕೊರೋನಾ ವಿರುದ್ಧ ಹೋರಾಡುವ ಶಕ್ತಿ ಬಂದಿದ್ದಲ್ಲಿ ಅವರ ರಕ್ತದ ಮಾದರಿಯನ್ನು ಪಡೆದು, ವ್ಯಾಕ್ಸಿನ್​​ನನ್ನು ಮಾರುಕಟ್ಟೆಗೆ ಬಿಡಲಾಗುತ್ತೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಜ್ಞಾನಿ ಚೆನ್ ವೀ, ಔಷಧ ಬಹುತೇಕ ಸಕ್ಸಸ್ ಆಗಿದೆ. ಆದ್ರೆ 6 ತಿಂಗಳ ಬಳಿಕ ಈ ವ್ಯಾಕ್ಸಿನ್ ತಾಕತ್ತು ತಿಳಿಯಲಿದ್ದು, ಅದನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ  ಮಾಡಲಿದ್ದೇವೆ. ಕೊರೋನಾ ವೈರಸ್​​​​​ನ್ನು ಇಡೀ ವಿಶ್ವದಲ್ಲಿ ಮಟ್ಟಹಾಕಬೇಕು ಅನ್ನೋದು ನಮ್ಮ ಉದ್ದೇಶ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply