ಲಕ್ಷಾಂತರ ರೂಪಾಯಿ ಮೊತ್ತದ ಮೀನುಗಳು ಮಣ್ಣುಪಾಲು..!

-masthmagaa.com:

ಕೊರೋನಾ ವೈರಸ್​​ನಿಂದಾಗಿ ಇಡೀ ವಿಶ್ವವೇ ತಲ್ಲಣಗೊಂಡಿದೆ. ಜೊತೆಗೆ ಕೊರೋನಾ ವಿಚಾರವಾಗಿ ವದಂತಿಗಳು ಕೂಡ ಜಾಸ್ತಿಯಾಗ್ತಿವೆ. ಚೀನಾದ ವುಹಾನ್​​ನಲ್ಲಿರೋ ಮಾಂಸದ ಮಾರುಕಟ್ಟೆಯಿಂದ ಕೊರೋನಾ ಬಂದಿದೆ ಎಂದು ಮಾಹಿತಿ ಲಭ್ಯವಾಗಿತ್ತು. ಇದಾದ ಬಳಿಕ ಭಾರತದಲ್ಲೂ ಕೋಳಿ ಸೇರಿದಂತೆ ಇತರೆ ಮಾಂಸಗಳನ್ನು ಸೇವಿಸಿದ್ರೆ ಕೊರೋನಾ ಬರುತ್ತೆ ಅನ್ನೋ ವದಂತಿ ಹರಡಿತು. ಇದ್ರಿಂದಾಗಿ ದೇಶದ ಮಾಂಸದ ಮಾರುಕಟ್ಟೆಗೆ ಭಾರಿ ದೊಡ್ಡ ಹೊಡೆತ ಕೊಟ್ಟಂತಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭಾಖಡಾ ಡ್ಯಾಮ್ ಮತ್ತು ಗೋವಿಂದ ಸಾಗರ ಸರೋವರದಲ್ಲಿ ಹಿಡಿಯಲಾಗಿದ್ದ, ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳನ್ನು ಗುಂಡಿ ತೆಗೆದು ಹೂತುಹಾಕಲಾಗಿದೆ. ಇಲ್ಲಿನ ಮೀನುಗಳನ್ನು ಹರಿಯಾಣ, ಪಂಜಾಬ್​ ಮತ್ತು ದೆಹಲಿಯ ಜನ ತುಂಬಾ ಇಷ್ಟಪಟ್ಟು ತಿಂತಾರೆ. ಆದ್ರೆ ಕೊರೋನಾ ಭೀತಿಯಿಂದಾಗಿ ಜನ ಮಾಂಸಾಹಾರ ಸೇವನೆ ತುಂಬಾ ಕಡಿಮೆ ಮಾಡಿದ್ದು, ಹಿಮಾಚಲ ಪ್ರದೇಶದಿಂದ ಹೊರರಾಜ್ಯಗಳಿಗೆ ಮೀನು ಪೂರೈಕೆಯಾಗುತ್ತಲೇ ಇಲ್ಲ. ಹೀಗಾಗಿ ಹಿಡಿದ ಮೀನುಗಳನ್ನು ಬೇರೆ ದಾರಿಯಿಲ್ಲದೇ ಮಣ್ಣು ಮಾಡಲಾಯ್ತು. ಜೊತೆಗೆ ಈ ಮಹಾಮಾರಿ ಕಾಟದಿಂದಾಗಿ ಹಿಮಾಚಲ ಪ್ರದೇಶದ 15 ಸಾವಿರ ಮಂದಿ ಮೀನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಅಂತ ತಿಳಿದುಬಂದಿದೆ.

-masthmagaa.com

Contact Us for Advertisement

Leave a Reply