ಪಾಕಿಸ್ತಾನಕ್ಕೆ ಹೋಗಲಿದ್ದಾರೆ ಮನಮೋಹನ್ ಸಿಂಗ್..!

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಭಾರತ-ಜಮ್ಮು ಕಾಶ್ಮೀರದ ಸಂಬಂಧ ಸರಿಯಾಗಿಲ್ಲ. ಆದ್ರೆ ಈ ಟೆನ್ಶನ್ ನಡುವೆಯೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಕರ್ತಾರ್‍ಪುರ್ ಸಾಹಿಬ್ ಗುರುದ್ವಾರದಲ್ಲಿ ನಡೆಯಲಿರೋ ಗುರುನಾನಕ್ ಜಯಂತಿಯಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ. ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಾಕ್‍ಗೆ ಹೋಗಲು ಮನಮೋಹನ್ ಸಿಂಗ್ ಅವರಿಗೆ ಆಮಂತ್ರಣ ನೀಡಿದ್ದರು. ಅದರಂತೆ ಮಾಜಿ ಪ್ರಧಾನಿ ಗುರುನಾನಕ್ ಜಯಂತಿಯಲ್ಲಿ ಭಾಗಿಯಾಗಲು ಒಪ್ಪಿದ್ದಾರೆ.

ಈ ಹಿಂದೆ ಪಾಕಿಸ್ತಾನ ಕೂಡ ಮನಮೋಹನ್ ಸಿಂಗ್ ಅವರಿಗೆ ಆಮಂತ್ರಣ ನೀಡಿತ್ತು. ಆದ್ರೆ ಆ ಆಮಂತ್ರಣವನ್ನು ಸಿಂಗ್ ತಿರಸ್ಕರಿಸಿದ್ದರು. ಅಲ್ಲದೆ ಪ್ರಧಾನಿ ಮೋದಿಯವರಿಗೂ ಪಾಕ್ ಸರ್ಕಾರ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿತ್ತು. ನವೆಂಬರ್ 9ರಂದು ಭಾರತೀಯ ಸಿಖ್ ಯಾತ್ರಿಗಳು ಕರ್ತಾರ್‍ಪುರ್‍ಗೆ ತೆರಳಲಿದ್ದಾರೆ.

Contact Us for Advertisement

Leave a Reply