masthmagaa.com:

ಬಿಹಾರದ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಮತ್ತು ಆರ್‌ಜೆಡಿ ಮಾಜಿ ನಾಯಕ ರಘುವಂಶ್ ಪ್ರಸಾದ್ ಸಿಂಗ್ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 74 ವರ್ಷದ ಅವರು ಎರಡು ದಿನಗಳ ಹಿಂದಷ್ಟೇ ಲಾಲು ಪ್ರಸಾದ್ ಯಾದವ್ ಅವರ ಆರ್​ಜೆಡಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಜೈಲಿನಿಂದಲೇ ಪತ್ರ ಬರೆದಿದ್ದ ಲಾಲು ಪ್ರಸಾದ್ ಯಾದವ್, ‘ನೀವು ಎಲ್ಲೂ ಹೋಗುತ್ತಿಲ್ಲ. ಗುಣಮುಖರಾಗಿ ಬನ್ನಿ, ನಂತರ ಮಾತನಾಡೋಣ’ ಅಂತ ಹೇಳಿದ್ದರು. ಆದ್ರೀಗ ರಘುವಂಶ್ ಪ್ರಸಾದ್ ಅವರೇ ಇಲ್ಲವಾಗಿದ್ದಾರೆ.

ಅಂದ್ಹಾಗೆ ರಘುವಂಶ್ ಪ್ರಸಾದ್ ಸಿಂಗ್​ಗೆ ಜೂನ್​ನಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಬಳಿಕ ಪಾಟ್ನಾದ ಏಮ್ಸ್​ಗೆ ದಾಖಲಾಗಿದ್ದರು. ನಂತರದಲ್ಲಿ ದೆಹಲಿಯ ಏಮ್ಸ್​ಗೆ ಶಿಫ್ಟ್ ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ಆರೋಗ್ಯ ತುಂಬಾ ಹದಗೆಟ್ಟಿತ್ತು, ಅವರನ್ನು ವೆಂಟಿಲೇಟರ್​ನಲ್ಲಿ ಇಡಲಾಗಿತ್ತು. ಉಸಿರಾಡಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದ ಅವರು ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಉಸಿರು ನಿಲ್ಲಿಸಿದ್ದಾರೆ. ಹಿರಿಯ ರಾಜಕಾರಣಿಯ ಅಗಲಿಕೆಗೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

-masthmagaa.com

 

Contact Us for Advertisement

Leave a Reply