ಫೇಸ್ ಮಾಸ್ಕ್ ಧರಿಸೋದನ್ನ ಕಡ್ಡಾಯ ಮಾಡಿದ ಒಡಿಶಾ..!

masthmagaa.com:

ಕೊರೋನಾ ವೈರಸ್​ ಹರಡುವುದನ್ನ ತಡೆಗಟ್ಟಲು ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳು ನಾನಾ ಕ್ರಮಗಳನ್ನ ಕೈಗೊಂಡಿದೆ. ಈ ಹೋರಾಟದ ಭಾಗವಾಗಿ ಒಡಿಶಾ ಸರ್ಕಾರ ಮಹತ್ವದ ಆದೇಶವನ್ನು ಹೊರಡಿದೆ.

ಅದರ ಪ್ರಕಾರ ನಾಗರಿಕರು ಯಾವುದೇ ಉದ್ದೇಶಕ್ಕಾಗಿ ಮನೆಯಿಂದ ಹೊರಬರುವಾಗ ಕಡ್ಡಾಯವಾಗಿ ಎರಡು ಪದರಗಳುಳ್ಳ ಫೇಸ್ ಮಾಸ್ಕ್ ಅಥವಾ ಬಟ್ಟೆಯನ್ನ ಧರಿಸಬೇಕು. ಇದು ಏಪ್ರಿಲ್ 9ರಿಂದ ಜಾರಿಗೆ ಬರಲಿದೆ. ಇಂತಹ ಕ್ರಮ ಕೈಗೊಂಡ ಮೊದಲ ರಾಜ್ಯ ಇದಾಗಿದೆ.

ಒಡಿಶಾದಲ್ಲಿ ಇದುವರೆಗೆ 21 ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

-masthmagaa.com

Contact Us for Advertisement

Leave a Reply