masthmagaa.com:

ಚಿನ್ನ ಮತ್ತು ಬೆಳ್ಳಿ ಸತತ ಎರಡನೇ ದಿನ ಕುಸಿತ ಕಂಡಿದೆ. ಸೋಮವಾರ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 47 ರೂಪಾಯಿ ಕುಸಿದು 51,394 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 40 ರೂಪಾಯಿ ಕುಸಿದು 49,650 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 201 ರೂಪಾಯಿ ಕಡಿಮೆಯಾಗಿ 65,223 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

ಷೇರುಪೇಟೆ ವಿಚಾರಕ್ಕೆ ಬಂದ್ರೆ ಇವತ್ತು 98 ಅಂಕ ಕುಸಿತ ಕಂಡ ಸಂವೇದಿ ಸೂಚ್ಯಂಕ 38,757ರಲ್ಲಿ ಅಂತ್ಯವಾಗಿದೆ. ನಿಫ್ಟಿ 24 ಅಂಕ ಕುಸಿದು 11,440 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 5 ಪೈಸೆ ಗಳಿಕೆ ಕಂಡು 73 ರೂಪಾಯಿ 48 ಪೈಸೆ ಆಗಿದೆ.

-masthmagaa.com

Contact Us for Advertisement

Leave a Reply