masthmagaa.com:

ಸತತ ಎರಡು ದಿನಗಳಿಂದ ಕುಸಿತ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇವತ್ತು ಏರಿಕೆ ಕಂಡು 50 ಸಾವಿರದ ಗಡಿ ದಾಟಿದೆ. ಮಂಗಳವಾರ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 499 ರೂಪಾಯಿ ಏರಿಕೆ ಕಂಡು 51,893 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 480 ರೂಪಾಯಿ ಜಾಸ್ತಿಯಾಗಿ 50,130 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 1,535 ಏರಿಕೆ ಕಂಡು 66,758 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

ಷೇರುಪೇಟೆ ವಿಚಾರಕ್ಕೆ ಬಂದ್ರೆ ಇವತ್ತು 288 ಅಂಕ ಏರಿಕೆ ಕಂಡ ಸಂವೇದಿ ಸೂಚ್ಯಂಕ 39,044ರಲ್ಲಿ ಅಂತ್ಯವಾಗಿದೆ. ನಿಫ್ಟಿ 82 ಅಂಕ ಏರಿಕೆ ಕಂಡು 11,522 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 16 ಪೈಸೆ ಕುಸಿದು 73 ರೂಪಾಯಿ 64 ಪೈಸೆ ಆಗಿದೆ. ಅಂದ್ರೆ 1 ಅಮೆರಿಕನ್ ಡಾಲರ್​​ಗೆ 73.64 ರೂಪಾಯಿ ಸಮ ಅಂತರ್ಥ.

-masthmagaa.com

Contact Us for Advertisement

Leave a Reply