masthmagaa.com:

ನಿನ್ನೆ ಭಾರಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಬುಧವಾರ ಇಳಿಕೆ ಕಂಡಿದೆ. ಇವತ್ತು 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 96 ರೂಪಾಯಿ ಇಳಿಕೆ ಕಂಡು 51,797 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 90 ರೂಪಾಯಿ ಇಳಿಕೆ ಕಂಡು 50,040 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 875 ಇಳಿಕೆ ಕಂಡು 65,883 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

ಷೇರುಪೇಟೆ ವಿಚಾರಕ್ಕೆ ಬಂದ್ರೆ ಬುಧವಾರ 259 ಅಂಕ ಏರಿಕೆ ಕಂಡ ಸಂವೇದಿ ಸೂಚ್ಯಂಕ 39,303ರಲ್ಲಿ ಅಂತ್ಯವಾಗಿದೆ. ನಿಫ್ಟಿ 83 ಅಂಕ ಏರಿಕೆ ಕಂಡು 11,605 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 12 ಪೈಸೆ ಗಳಿಕೆ ಕಂಡು 73 ರೂಪಾಯಿ 52 ಪೈಸೆ ಆಗಿದೆ. ಅಂದ್ರೆ 1 ಅಮೆರಿಕನ್ ಡಾಲರ್​​ಗೆ 73.52 ರೂಪಾಯಿ ಅಂತರ್ಥ.

-masthmagaa.com

Contact Us for Advertisement

Leave a Reply