masthmagaa.com:

ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸತತ ಎರಡನೇ ದಿನ ಇಳಿಕೆ ಕಂಡಿದೆ. ಗುರುವಾರ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 286 ರೂಪಾಯಿ ಕಡಿಮೆಯಾಗಿ 51,511 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 280 ರೂಪಾಯಿ ಕಡಿಮೆಯಾಗಿ 49,760 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 665 ರೂಪಾಯಿ ಇಳಿಕೆ ಕಂಡು 65,218 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

ಷೇರುಪೇಟೆ ವಿಚಾರಕ್ಕೆ ಸತತ ಎರಡು ದಿನಗಳಿಂದ ಏರಿಕೆ ಕಂಡಿದ್ದ ಸಂವೇದಿ ಸೂಚ್ಯಂಕ ಗುರುವಾರ 323 ಅಂಕ ಕುಸಿದು 38,980ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 88 ಅಂಕ ಕುಸಿದು 11,516 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 14 ಪೈಸೆ ಕುಸಿದು 73 ರೂಪಾಯಿ 66 ಪೈಸೆ ಆಗಿದೆ. ಅಂದ್ರೆ 1 ಅಮೆರಿಕನ್ ಡಾಲರ್​​ಗೆ 73.66 ರೂಪಾಯಿ ಸಮ ಅಂತರ್ಥ.

-masthmagaa.com

Contact Us for Advertisement

Leave a Reply