masthmagaa.com:

ಸತತ ಎರಡು ದಿನ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಶುಕ್ರವಾರ ತುಸು ಏರಿಕೆ ಕಂಡಿದೆ. ಇವತ್ತು 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 109 ರೂಪಾಯಿ ಜಾಸ್ತಿಯಾಗಿ 51,620 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿ ಜಾಸ್ತಿಯಾಗಿ 49,860 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 687 ರೂಪಾಯಿ ಏರಿಕೆಯಾಗಿದ್ದು 65,905 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

ಷೇರುಪೇಟೆ ವಿಚಾರಕ್ಕೆ ಸತತ ಎರಡನೇ ದಿನ ಸಂವೇದಿ ಸೂಚ್ಯಂಕ ಕುಸಿತ ಕಂಡಿದೆ. ಶುಕ್ರವಾರ 134 ಅಂಕಗಳ ಕುಸಿತ ಕಂಡ ಸಂವೇದಿ ಸೂಚ್ಯಂಕ 38,845ರಲ್ಲಿ ಈ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 11 ಅಂಕ ಕುಸಿದು 11,504 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 21 ಪೈಸೆ ಏರಿಕೆಯಾಗಿ 73 ರೂಪಾಯಿ 45 ಪೈಸೆ ಆಗಿದೆ.

-masthmagaa.com

Contact Us for Advertisement

Leave a Reply