masthmagaa.com:

ಸೋಮವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ತುಸು ಇಳಿಕೆ ಕಂಡಿದೆ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 279 ರೂಪಾಯಿ ಇಳಿಕೆ ಕಂಡು 51,341 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 260 ರೂಪಾಯಿ ಕಡಿಮೆಯಾಗಿ 49,600 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 1,764 ರೂಪಾಯಿ ಕಡಿಮೆಯಾಗಿ 64,141 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

ಷೇರುಪೇಟೆ ವಿಚಾರಕ್ಕೆ ಬಂದ್ರೆ ಇವತ್ತು 812 ಅಂಕಗಳ ಭಾರಿ ಕುಸಿತ ಕಂಡ ಸಂವೇದಿ ಸೂಚ್ಯಂಕ 38,034ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 254 ಅಂಕ ಕುಸಿದು 11,256 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 7 ಪೈಸೆ ಗಳಿಕೆ ಕಂಡು 73 ರೂಪಾಯಿ 38 ಪೈಸೆ ಆಗಿದೆ.

-masthmagaa.com

Contact Us for Advertisement

Leave a Reply