masthmagaa.com:

ನಿನ್ನೆ 400 ರೂಪಾಯಿಯಷ್ಟು ಏರಿಕೆ ಕಂಡಿದ್ದ ಚಿನ್ನ-ಬೆಳ್ಳಿ ಬೆಲೆ ಶುಕ್ರವಾರ ತುಸು ಇಳಿಕೆ ಕಂಡಿದೆ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 35 ರೂಪಾಯಿ ಕುಸಿದು ₹51,441 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 40 ರೂಪಾಯಿ ಕುಸಿದು ₹49,690 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 667 ರೂಪಾಯಿ ಕಡಿಮೆಯಾಗಿ 65,424 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಶುಕ್ರವಾರ 14 ಅಂಕಗಳ ಅಲ್ಪ ಏರಿಕೆ ಕಂಡ ಸೆನ್ಸೆಕ್ಸ್​ 38,855ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 15 ಅಂಕ ಏರಿಕೆ ಕಂಡು 11,464 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 7 ಪೈಸೆ ಕುಸಿದು ₹73.53 ಆಗಿದೆ. ಅಂದ್ರೆ ಒಂದು ಅಮೆರಿಕನ್ ಡಾಲರ್​ಗೆ 73 ರೂಪಾಯಿ 53 ಪೈಸೆ ಕೊಡಬೇಕು.

-masthmagaa.com

Contact Us for Advertisement

Leave a Reply