masthmagaa.com:

ಮಂಗಳವಾರ 52 ಅಂಕಗಳ ಅಲ್ಪ ಕುಸಿತ ಕಂಡ ಸೆನ್ಸೆಕ್ಸ್​ 38,365ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 38 ಅಂಕ ಇಳಿಕೆ ಕಂಡು 11,317 ಆಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಸತತ ಎರಡನೇ ದಿನ ಕುಸಿದಿದೆ. ಇವತ್ತು 25 ಪೈಸೆ ಕುಸಿದ ರೂಪಾಯಿ ಮೌಲ್ಯ ₹73.60 ಆಗಿದೆ. ಅಂದ್ರೆ ಒಂದು ಅಮೆರಿಕನ್ ಡಾಲರ್​ಗೆ 73 ರೂಪಾಯಿ 60 ಪೈಸೆ ಕೊಡಬೇಕು.

ಇನ್ನು ಚಿನ್ನ ಮತ್ತು ಬೆಳ್ಳಿ ವಿಚಾರಕ್ಕೆ ಬಂದ್ರೆ.. ಇವತ್ತು 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 57 ರೂಪಾಯಿ ಜಾಸ್ತಿಯಾಗಿ ₹51,075 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 60 ರೂಪಾಯಿ ಏರಿಕೆ ಕಂಡು ₹49,340 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 192 ರೂಪಾಯಿ ಕಡಿಮೆಯಾಗಿ 64,825 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

-masthmagaa.com

Contact Us for Advertisement

Leave a Reply