ಚೀನಾದ ದುರ್ಬುದ್ಧಿಗೆ ಇದೇ ಸಾಕ್ಷಿ ನೋಡಿ..!

masthmagaa.com:

ನ್ಯೂಯಾರ್ಕ್​​: ಹುಟ್ಟು ಗುಣ ಸುಟ್ರೂ ಹೋಗಲ್ವಂತೆ.. ಅದೇ ರೀತಿ ಚೀನಾ ತನ್ನ ಬುದ್ಧಿ ಬಿಡೋದೇ ಇಲ್ಲ.. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜರ್ಮನಿಯ 2 ವರ್ಷಗಳ ಸದಸ್ಯತ್ವದ ಅವಧಿ ಇದೇ ತಿಂಗಳು ಅಂತ್ಯವಾಗಲಿದೆ. ಅದ್ರ ಜೊತೆಗೆ ಜರ್ಮನಿ ರಾಯಭಾರಿ ಕ್ರಿಸ್ಟೋಫ್ ಹ್ಯೂಸ್ಜೆನ್ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಹೀಗಾಗಿ ನ್ಯೂಯಾರ್ಕ್​​ನಲ್ಲಿ ನಡೆದ ಕೊನೆಯ ಸಭೆಯಲ್ಲಿ ಮಾತನಾಡಿದ್ದ ಅವರು, ಚೀನಾ ಬಂಧಿಸಿರುವ ಇಬ್ಬರು ಕೆನಡಾದ ಪ್ರಜೆಗಳನ್ನು ಬಿಡುಗಡೆ ಮಾಡಬೇಕು. ಈ ಸಂಬಂಧ ಚೀನೀ ಸಹೋದ್ಯೋಗಿಗಳು ಬೀಜಿಂಗ್​​​ಗೆ ಮನವಿ ಮಾಡಬೇಕು. ಕ್ರಿಸ್​​ಮಸ್ ಸಮಯದಲ್ಲಿ ಇದೊಂದು ಉತ್ತಮ ಕಾರ್ಯವಾಗಲಿದೆ. ಜೊತೆಗೆ ಈ ಮೂಲಕ ನನ್ನ ಅಧಿಕಾರಾವಧಿಯನ್ನು ಅಂತ್ಯಗೊಳಿಸಲು ಬಯಸುತ್ತೇನೆ ಅಂತ ಹೇಳಿದ್ರು.

ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ ಉಪ ರಾಯಭಾರಿ ಗೆಂಗ್ ಶುವಾಂಗ್​​​, ಹ್ಯೂಸ್ಜೆನ್ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವೇದಿಕೆಯನ್ನು ಬೇರೆಯವರ ಬಗ್ಗೆ ಟೀಕೆ ಮಾಡಲು ಬಳಸಿಕೊಳ್ತಿದ್ದಾರೆ. ನೀವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಹೊರಹೋಗ್ತಿರೋದಕ್ಕೆ ಒಳ್ಳೆಯದಾಗಲಿ ಅಂತ ಹೃದಯಪೂರ್ವಕವಾಗಿ ಹೇಳುತ್ತೇನೆ. ನೀವು ಇಲ್ಲದೇ 2021ರಲ್ಲಿ ಭದ್ರತಾ ಮಂಡಳಿ ಸರಿಯಾದ ರೀತಿಯಲ್ಲಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸಲಿದೆ ಅನ್ನೋ ಭರವಸೆ ನಮಗಿದೆ ಅಂತ ಹೇಳಿದ್ದಾರೆ.

ಮೈಕಲ್ ಕೋವ್ರಿಗ್ ಮತ್ತು ಮೈಕಲ್ ಸ್ಪಾವೋರ್ ಎಂಬುವವರನ್ನು ಚೀನಾ ಬಂಧಿಸಿತ್ತು. ಕೋವ್ರಿಗ್ ಓರ್ವ ರಾಜತಾಂತ್ರಿಕ ಅಧಿಕಾರಿಯಾಗಿದ್ದು, ಅಂತಾರಾಷ್ಟ್ರೀಯ ಬಿಕ್ಕಟ್ಟು ಥಿಂಕ್ ಟ್ಯಾಂಕ್​​ ತಂಡದ ಸಲಹೆಗಾರರಾಗಿದ್ರು. ಅದೇ ರೀತಿ ಮೈಕಲ್ ಸ್ಪಾವೋರ್ ಓರ್ವ ಉದ್ಯಮಿಯಾಗಿದ್ರು. 2018ರಲ್ಲಿ ಕೆನೆಡಾದ ಪೊಲೀಸರು ಅಮೆರಿಕದ ವಾರೆಂಟ್ ಅನ್ವಯ ಚೀನಾದ ಹುವಾವೇ ಟೆಕ್ನಾಲಜೀಸ್​ ಕೋ ಲಿಮಿಟೆಡ್ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಮೆಂಗ್ ವಾನ್​ಶೂ ಅವರನ್ನು ಬಂಧಿಸಿತ್ತು. ಅದರ ಬೆನ್ನಲ್ಲೇ ಚೀನಾ ಬೀಜಿಂಗ್​​ನಲ್ಲಿ ಕೋವ್ರಿಗ್ ಮತ್ತು ಮೈಕಲ್ ಸ್ಪಾವೋರ್ ಅವರನ್ನು ವಶಕ್ಕೆ ಪಡೆದಿತ್ತು.

-masthmagaa.com

Contact Us for Advertisement

Leave a Reply