masthmagaa.com:

ವಾಲ್ವ್ (ಕವಾಟ)​ ಇರುವ N​-95 ಮಾಸ್ಕ್​ಗಳನ್ನ ಧರಿಸೋದು ಅಪಾಯಕಾರಿ ಅಂತ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಎಚ್ಚರಿಸಿದೆ. ಇಂತಹ ಮಾಸ್ಕ್​ಗಳು ಸೋಂಕು ಹರಡುವುದನ್ನ ತಡೆಯುವುದಿಲ್ಲ. ಇದು ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳಿಗೆ ವಿರುದ್ಧ ಅಂತ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದೆ. ಇಂತಹ ಮಾಸ್ಕ್​ಗಳ ಬಳಕೆಯನ್ನ ತಡೆಯಲು ಸಂಬಂಧಪಟ್ಟ ಇಲಾಖೆ ಅಥವಾ ಅಧಿಕಾರಿಗಳಿಗೆ ಸೂಚನೆ ನೀಡುವಂತೆಯೂ ತಿಳಿಸಿದೆ.

ಕೇಂದ್ರ ಆರೋಗ್ಯ ಇಲಾಖೆಯ ಡೈರೆಕ್ಟರ್ ಜನರಲ್ ಆಫ್ ಹೆಲ್ತ್​ ಸರ್ವಿಸಸ್​ (DGHS) ಈ ಸಂಬಂಧ ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಈ ವಿಚಾರವನ್ನು ಉಲ್ಲೇಖಿಸಿದೆ. ಕೇವಲ ಗೊತ್ತುಪಡಿಸಿದ ಆರೋಗ್ಯ ಸಿಬ್ಬಂದಿ ಮಾತ್ರ ಕವಾಟ ಇರುವ ಎನ್​-95 ಮಾಸ್ಕ್​ಗಳನ್ನ ಧರಿಸಬಹುದು. ಆದ್ರೆ ಜನ ಸಾಮಾನ್ಯರು ಕೂಡ ಇಂತಹ ಮಾಸ್ಕ್ ಬಳಸೋದು ಸೂಕ್ತವಲ್ಲ ಎಂದಿದೆ. ಜೊತೆಗೆ ಮನೆಯಲ್ಲೇ ತಯಾರಿಸಿದ ಮಾಸ್ಕ್​ಗಳನ್ನ ಬಳಸುವಂತೆ ಸಲಹೆ ನೀಡಿದೆ.

ವಾಲ್ವ್​ ಇರುವ ಮಾಸ್ಕ್ ಯಾಕೆ ಒಳ್ಳೇದಲ್ಲ..?

ಮಾಸ್ಕ್ ಧರಿಸುವ ಉದ್ದೇಶವೇ ಬೇರೆಯವರಿಂದ ಸೋಂಕು ನಮಗೆ ತಗುಲದಿರಲಿ ಮತ್ತು ನಮ್ಮಿಂದ ಸೋಂಕು ಬೇರೆಯವರಿಗೆ ಹರಡದಿರಲಿ ಅನ್ನೋದು. ವಾಲ್ವ್ ಇರುವ ಮಾಸ್ಕ್​ಗಳನ್ನ ಧರಿಸುವುದರಿಂದ ಉಸಿರಾಡುವ ಗಾಳಿಯು ವಾಲ್ವ್​ ಮೂಲಕ ಫಿಲ್ಟರ್ ಆಗಿ ಒಳಗೆ ಹೋಗುತ್ತದೆ. ಇದರಿಂದ ವೈರಾಣು ಮೂಗು ಅಥವಾ ಬಾಯಿಯ ಮೂಲಕ ದೇಹಕ್ಕೆ ಹೋಗುವುದಿಲ್ಲ. ಆದ್ರೆ ಆ ವ್ಯಕ್ತಿಯು ಉಸಿರಾಡಿದ ಗಾಳಿ ಹೊರ ಹೋಗುವಾಗ ಫಿಲ್ಟರ್ ಆಗದೆ ನೇರವಾಗಿ ಹೊರಗೆ ಹೋಗುತ್ತದೆ. ಈ ಗಾಳಿಯನ್ನ ಬೇರೆಯವರು ಉಸಿರಾಡಿದಾಗ ಅವರಿಗೆ ಸೋಂಕು ತಗುವ ಸಾಧ್ಯತೆ ಇರುತ್ತದೆ.

-masthmagaa.com

Contact Us for Advertisement

Leave a Reply