ಏ.14ರ ಬಳಿಕವೂ ಲಾಕ್​ಡೌನ್ ಇರುತ್ತಾ..? ಕೇಂದ್ರ ಹೇಳಿದ್ದೇನು..?

-masthmagaa.com:

ದೆಹಲಿ:  21 ದಿನದ ಲಾಕ್ ಡೌನ್ ಇನ್ನಷ್ಟು ದಿನ ಮುಂದುವರಿಯಬಹುದು ಎಂಬುದು ಊಹಾಪೋಹ ಸುದ್ದಿ  ಅಂತ ಪ್ರಸಾರ ಭಾರತಿ ತಿಳಿಸಿದೆ. ಇದರಿಂದ ಬೆದರಿದ ವಲಸಿಗರು ತಮ್ಮ ತಮ್ಮ ಊರುಗಳತ್ತ ಗಂಟು ಮೂಟೆ ಸಮೇತ ಹೊರಟಿದ್ದಾರೆ. ಆದ್ರೆ ಇದೆಲ್ಲಾ ಸುಳ್ಳು.. ಕೇಂದ್ರ ಸರ್ಕಾರ ಲಾಕ್ ಡೌನ್ ವಿಸ್ತರಿಸುವ ಯಾವುದೇ ಯೋಜನೆ ಹೊಂದಿಲ್ಲ. ಇದರಿಂದ ಯಾರು ಹೆದರುವ ಅಗತ್ಯ ಇಲ್ಲ ಅಂತ ಸಂಸದೀಯ ಕಾರ್ಯದರ್ಶಿ ರಾಜೀವ್ ಗೌಬ ಸ್ಪಷ್ಟಪಡಿಸಿದ್ದಾರೆ ಅಂತ ತಿಳಿಸಿದೆ. ಏಪ್ರಿಲ್ 14ರವರೆಗೂ ಲಾಕ್ ಡೌನ್ ಇರಲಿದೆ. ಮುಂದಿನ ಪರಿಸ್ಥಿತಿ ನೋಡಿಕೊಂಡು ನಂತರ ಆಯಾ ರಾಜ್ಯಗಳ ನಿರ್ಧಾರಕ್ಕೆ ಬಿಡಲಾಗುತ್ತೆ. ಆದ್ರೆ ಏಪ್ರಿಲ್ 14ರವರೆಗೆ ಜನ ಸಹಕರಿಸಬೇಕು. ಮನೆಯಿಂದ ಹೊರಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ ಅಂತ ಪ್ರಸಾರ ಭಾರತಿ ತಿಳಿಸಿದೆ.

-masthmagaa.com

Contact Us for Advertisement

Leave a Reply