masthmagaa.com:

ಹಾಸನ ಜಿಲ್ಲೆಯಲ್ಲಿ ಇಂದು 127 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, ಬರೋಬ್ಬರಿ 9 ಸೋಂಕಿತರು ಮೃತಪಟ್ಟಿದ್ದಾರೆ ಅಂತ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,158ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ. ಇವತ್ತು 23 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1,247 ಆಗಿದೆ. ಸದ್ಯ ಜಿಲ್ಲೆಯಲ್ಲಿ 1,823 ಸಕ್ರಿಯ ಪ್ರಕರಣಗಳಿವೆ.

ಇವತ್ತಿನ ಪ್ರಕರಣಗಳು:

ಹಾಸನ – 65

ಅರಕಲಗೂಡು – 14

ಬೇಲೂರು – 12

ಹೊಳೆನರಸೀಪುರ – 11

ಚನ್ನರಾಯಪಟ್ಟಣ – 10

ಅರಸೀಕೆರೆ – 8

ಸಕಲೇಶಪುರ – 5

ಆಲೂರು – 2

ಇತರೆ – 0

-masthmagaa.com

Contact Us for Advertisement

Leave a Reply