ಭಾರತದಲ್ಲಿ $10 ಬಿಲಿಯನ್‌ ಹೂಡಿಕೆಗೆ ಮುಂದಾದ KKR & Co!

masthmagaa.com:

ಜಗತ್ತಿನ ಅತಿದೊಡ್ಡ ಖಾಸಗಿ ಈಕ್ವಿಟಿ ಸಂಸ್ಥೆಯಾಗಿರೊ KKR & Co, ಭಾರತದಲ್ಲಿ 10 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 83 ಸಾವಿರ ಕೋಟಿ ರೂಪಾಯಿಯನ್ನ ಹೂಡಿಕೆ ಮಾಡೋಕೆ ಮುಂದಾಗಿದೆ. ಈ ಮಾಹಿತಿಯನ್ನ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ ಹೆನ್ರಿ ಕ್ರಾವಿಸ್‌ ತಿಳಿಸಿದ್ದಾರೆ. ಇಂಟರ್‌ವ್ಯೂ ಒಂದ್ರಲ್ಲಿ ಮಾತಾಡಿರೊ ಹೆನ್ರಿ, ಭಾರತದ ಆರ್ಥಿಕ ಬೆಳವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭವಿಷ್ಯದ ಬೆಳವಣಿಗೆ ಬಗ್ಗೆ ಉಲ್ಲೇಖಿಸಿ, KKRಗೆ ಭಾರತ ಹೆಚ್ಚಿನ ಆದ್ಯತೆಯಾಗಿದೆ. ಭಾರತ ಅತಿ ಪ್ರಮುಖವಾದ ಹಾಗೂ ಅತಿದೊಡ್ಡ ಅವಕಾಶವಾಗಿದೆ ಅಂತ ಹೇಳಿದ್ದಾರೆ. ಹಾಗೇ ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಪ್ಲಾನ್‌ ಇದೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply