ರಾಷ್ಟ್ರ ರಾಜಧಾನಿಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್​​ಗಳ ಹಾವಳಿ..!

ದೆಹಲಿ: ಮಧ್ಯಪ್ರದೇಶದಲ್ಲಿ ಹನಿಟ್ರ್ಯಾಪ್ ಮಾಡ್ತಿದ್ದ ಸೆಕ್ಸ್​ ರಾಕೆಟ್ ಬೆಳಕಿಗೆ ಬಂದು ಭಾರಿ ಸದ್ದು ಮಾಡಿರೋದು ನಿಮಗೆ ಗೊತ್ತಿದೆ. ಅದೇ ರೀತಿ ಈಗ ದೆಹಲಿಯಲ್ಲೂ ಈ ರೀತಿಯಲ್ಲೇ ಹನಿಟ್ರ್ಯಾಪ್ ಮಾಡ್ತಿರೋ ಐದಕ್ಕೂ ಹೆಚ್ಚು ಗ್ಯಾಂಗ್​ಗಳಿರೋದು ಬೆಳಕಿಗೆ ಬಂದಿದೆ. ಮೇಲ್ ಟುಡೇ ಎಂಬ ಪತ್ರಿಕೆ ಒಂದು ರಿಯಾಲಿಟಿ ಚೆಕ್ ನಡೆಸಿದ್ದು, ಈ ಹನಿಟ್ರ್ಯಾಪ್ ಗ್ಯಾಂಗ್​ಗಳನ್ನು ಬೆಳಕಿಗೆ ತಂದಿವೆ.

ಈ ಗ್ಯಾಂಗ್​​ಗಳು ಉದ್ಯಮಿಗಳು, ಬಿಲ್ಡರ್​ಗಳು, ವೈದ್ಯರು, ಜ್ಯುವೆಲ್ಸ್ ಮಾಲೀಕರು, ಸರ್ಕಾರಿ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಇದರಲ್ಲಿ ಸುಂದರವಾಗಿರುವ ವಿದೇಶಿ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿತ್ತು. ಕೆಲವೊಮ್ಮೆ ದೊಡ್ಡ ಗ್ರಾಹಕರ ಸೋಗಿನಲ್ಲಿ, ಇನ್ನು ಕೆಲವೊಮ್ಮೆ ಪೇಶೆಂಟ್ ಸೋಗಿನಲ್ಲಿ ತಮ್ಮ ಟಾರ್ಗೆಟ್ ರೀಚ್ ಆಗುತ್ತಿದ್ದರು. ಇದಾದ ಬಳಿಕ ಶ್ರೀಮಂತರನ್ನು ಟಾರ್ಗೆಟ್ ಮಾಡಿಕೊಂಡು ಕೋಟಿ ಕೋಟಿ ಸುಲಿಗೆ ಮಾಡುತ್ತಿದ್ದರು ಎನ್ನಲಾಗಿದೆ.

Contact Us for Advertisement

Leave a Reply