ಮತ್ತೆ ಏರ್​ ಇಂಡಿಯಾ ವಿಮಾನ ಬ್ಯಾನ್ ಮಾಡಿದ ಹಾಂಗ್ ಕಾಂಗ್..!

masthmagaa.com:

ಹಾಂಗ್ ಕಾಂಗ್​: ದೆಹಲಿಯಿಂದ ಹೋಗುವ ಎಲ್ಲಾ ಏರ್​ ಇಂಡಿಯಾ ವಿಮಾನಗಳನ್ನು ಹಾಂಗ್​ ಕಾಂಗ್ ಮತ್ತೊಮ್ಮೆ ನಿರ್ಬಂಧಿಸಿದೆ. ಡಿಸೆಂಬರ್ 3ರವರೆಗೆ ಏರ್​ ಇಂಡಿಯಾ ವಿಮಾನಗಳನ್ನು ಬ್ಯಾನ್ ಮಾಡಿದ್ದು, ಈ ಮೂಲಕ 5ನೇ ಬಾರಿಗೆ ನಿರ್ಬಂಧ  ವಿಧಿಸಿದಂತಾಗಿದೆ. ಈ ವಾರದ ಆರಂಭದಲ್ಲಿ ಏರ್​​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ ಕೆಲವರಲ್ಲಿ ಕೊರೋನಾ ಸೋಂಕು ಕಂಡು ಬಂದಿತ್ತು. ಹೀಗಾಗಿ ಹಾಂಗ್ ಕಾಂಗ್ ಈ ನಿರ್ಧಾರ ತೆಗೆದುಕೊಂಡಿದೆ.

ಭಾರತದಿಂದ ತೆರಳುವ ಪ್ರಯಾಣಿಕರಿಗೆ ಈಗಾಗಲೇ ಕೆಲವೊಂದು ರೂಲ್ಸ್​ಗಳನ್ನು ಮಾಡಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕನೂ ಕೊರೋನಾ ಪರೀಕ್ಷೆ ಮಾಡಿಸಿ, ನೆಗೆಟಿವ್ ರಿಪೋರ್ಟ್​​​ ತೆಗೆದುಕೊಂಡು ಹೋಗಬೇಕು.. ಜೊತೆಗೆ ಕೊರೋನಾ ಪರೀಕ್ಷೆ ಪ್ರಯಾಣಕ್ಕೂ ಹಿಂದಿನ 72 ಗಂಟೆಗಳಲ್ಲೇ ನಡೆಸಿರಬೇಕು ಅಂತ ನಿಯಮವಿದೆ.

ಈ ಹಿಂದೆ ಆಗಸ್ಟ್​​ 18ರಿಂದ 31, ಸೆಪ್ಟೆಂಬರ್ 20ರಿಂದ ಅಕ್ಟೋಬರ್ 3, ಅಕ್ಟೋಬರ್ 17ರಿಂದ 30 ಮತ್ತು ಅಕ್ಟೋಬರ್ 28ರಿಂದ ನವೆಂಬರ್ 10ರವರೆಗೆ ಏರ್​ಇಂಡಿಯಾ ವಿಮಾನವನ್ನು ಹಾಂಗ್​​ಕಾಂಗ್​​ ಬ್ಯಾನ್ ಮಾಡಿತ್ತು.

masthmagaa.com:

Contact Us for Advertisement

Leave a Reply