ಕಾಬೂಲ್​​ನಲ್ಲಿ ನಮ್ಮ ರಾಯಭಾರಿ ಕಚೇರಿ ಕಾದಿದ್ದ ನಾಯಿಗಳಿಗೆ ಆಶ್ರಯ

masthmagaa.com:

ಅಫ್ಘಾನಿಸ್ತಾನದ ಕಾಬೂಲ್​ನ ಭಾರತೀಯ ರಾಯಭಾರಿ ಕಚೇರಿ ಕಾದಿದ್ದ ಮೂರು ನಾಯಿಗಳಾದ ಮಾಯಾ, ರೂಬಿ ಮತ್ತು ಬಾಬಿಗೆ ದೆಹಲಿಯಲ್ಲಿ ಆಶ್ರಯ ಸಿಕ್ಕಿದೆ. ಈ ಮೂರು ನಾಯಿಗಳನ್ನು ಸ್ಥಳಾಂತರ ಪ್ರಕ್ರಿಯೆಯ ಆರಂಭದಲ್ಲೇ ಭಾರತಕ್ಕೆ ಕರ್ಕೊಂಡು ಬರಲಾಗಿತ್ತು. ಗುಜರಾತ್​​ನ ಜಮ್​ನಗರದ ಏರ್​ಫೋರ್ಸ್ ಸ್ಟೇಷನ್​​​ಗೆ ಕರೆತರಲಾಗಿತ್ತು. ಅಲ್ಲಿಂದ ಈಗ ದೆಹಲಿಯ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್​​ನ ಛಾವ್ಲಾ ಕ್ಯಾಂಪ್​​​ಗೆ ಕರೆತರಲಾಗಿದೆ. ಈ ನಾಯಿಗಳು ಕಳೆದ 3 ವರ್ಷಗಳಿಂದ ಅಫ್ಘಾನಿಸ್ತಾನದ ಕಾಬೂಲ್​​ನಲ್ಲಿ, ಯೋಧರಂತೆಯೇ ರಾಯಭಾರಿ ಕಚೇರಿಯನ್ನು ಕಾದಿದ್ದವು.

-masthmagaa.com

Contact Us for Advertisement

Leave a Reply