ಎಣ್ಣೆ ಮುಂದೆ ನಡೆಯಲ್ವಂತೆ ಕೊರೋನಾವೈರಸ್ ಆಟ..! ನಿಮಿಷದಲ್ಲೇ ಗೊಟಕ್..!

ಕೊರೋನಾವೈರಸ್ ವಿಶ್ವಕ್ಕೇ ಸವಾಲಾಗಿ ಪರಿಣಮಿಸಿದ್ದು, ಜರ್ಮನಿಯ ವಿಜ್ಞಾನಿಗಳು ಕೊರೋನಾಗೆ ಪರಿಹಾರ ಕಂಡು ಹಿಡಿದಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಿರುವ ರೂಹ್ರ್​​​​​​ ಮತ್ತು ಗ್ರೀಫ್ಸ್​​ವರ್ಲ್ಡ್​​ ಯೂನಿವರ್ಸಿಟಿ ವಿಜ್ಞಾನಿಗಳು ಕೊರೋನಾವೈರಸ್ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅಲ್ಲದೆ ಸೋಂಕು ನಿವಾರಕಗಳ ಮೂಲಕವೇ ಕೊರೋನಾವೈರಸ್ ಮಟ್ಟಹಾಕಬಹುದು ಎಂದು ತಿಳಿಸಿದ್ದಾರೆ.

ಕೊರೋನಾವೈರಸ್ 30 ಡಿಗ್ರಿಸೆಲ್ಶಿಯಸ್​​ಗಿಂತ ಹೆಚ್ಚಿನ ತಾಪಮಾನದಲ್ಲಿ ಬದುಕೋದಿಲ್ಲ. ತಾಪಮಾನ ಹೆಚ್ಚಿದಂತೆ ವೈರಸ್ ಸತ್ತು ಹೋಗುತ್ತೆ. ಆಲ್ಕೋಹಾಲ್ ಅಂದ್ರೆ ಮದ್ಯ ಕೊರೋನಾವೈರಸನ್ನು 1 ನಿಮಿಷದಲ್ಲಿ ಸಾಯಿಸುವ ಶಕ್ತಿ ಹೊಂದಿದೆ ಅಂತ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅಂದ್ರೆ ವೈರಸ್ ಸೋಂಕಿತ ಮನುಷ್ಯರು ಎಣ್ಣೆ ಹೊಡೆದ ಕೂಡಲೇ ಸೋಂಕಿನಿಂದ ಮುಕ್ತಿ ಸಿಗುತ್ತೆ ಅಂತ ಅರ್ಥ ಅಲ್ಲ. ನಿರ್ಜೀವ ವಸ್ತುಗಳ ಮೇಲಿರುವ ಈ ವೈರಸ್ ಇದ್ದರೆ, ಆಲ್ಕೋಹಾಲ್ ಹಾಕಿ ಕ್ಲೀನ್ ಮಾಡಿದ್ರೆ ವೈರಸ್ ಸತ್ತು ಹೋಗುತ್ತೆ.

ಅಲ್ಲದೆ ಈ ವೈರಸ್ ಉಳಿದ ವೈರಸ್​​ಗಳಿಗೆ ಹೋಲಿಸಿದ್ರೆ ಹೆಚ್ಚು ದಿನಗಳ ಕಾಲ ಜೀವಂತವಾಗಿರುತ್ತೆ. ಇವುಗಳು ಕೇವಲ ಜೀವಿಗಳ ದೇಹದಲ್ಲಿ ಮಾತ್ರವಲ್ಲದೇ ನಿರ್ಜೀವ ವಸ್ತುಗಳಾದ ಕಟ್ಟಿಗೆ, ಗ್ಲಾಸ್​, ಪ್ಲಾಸ್ಟಿಕ್​ನಂತಹ ವಸ್ತುಗಳಲ್ಲೂ ಹೆಚ್ಚುದಿನಗಳ ಕಾಲ ಜೀವಂತವಾಗಿರುವ ಶಕ್ತಿ ಹೊಂದಿವೆ. ಸಾಮಾನ್ಯವಾಗಿ ವೈರಸ್​​ಗಳು 2-ರಿಂದ 3 ದಿನ ಜೀವಂತವಾಗಿರುತ್ತವೆ. ಆದ್ರೆ ಕೊರೋನಾವೈರಸ್ 9 ದಿನಗಳ ಕಾಲ ಜೀವಂತವಾಗಿರುತ್ತೆ. ಅದ್ರಲ್ಲೂ ತಾಪಮಾನ 4 ಡಿಗ್ರಿಗಿಂತ ಕಡಿಮೆ ಇದ್ರೆ ಈ ಮಹಾಮಾರಿ 1 ತಿಂಗಳವರೆಗೆ ಜೀವಂತವಾಗಿರುತ್ತೆ ಅಂತ ಜರ್ಮನಿಯ ವಿಜ್ಞಾನಿಗಳು ತಿಳಿಸಿದ್ದಾರೆ.

Contact Us for Advertisement

Leave a Reply