ಕಾಂಗ್ರೆಸ್‌ ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ರಾಜ್ಯಕ್ಕೆ ಬಂದ ಖರ್ಗೆ! ಹೇಳಿದ್ದೇನು?

masthmagaa.com:

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನಾ ಖರ್ಗೆ ಇಂದು ತವರು ರಾಜ್ಯಕ್ಕೆ ಅಂದ್ರೆ ಕರ್ನಾಟಕಕ್ಕೇ ಭೇಟಿ ನೀಡಿದ್ದಾರೆ. ಕಾಂಗ್ರೆಸ್‌ ಪ್ರೆಸಿಡೆಂಟ್‌ ಆದ್ಮೇಲೆ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿರೋ ಅವರನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಸ್ವಾಗತ ಮಾಡಿದ್ದಾರೆ. ಬಳಿಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರ್ವೋದಯ ಹೆಸರಿನ ಸಮಾವೇಶ ನಡೆಸಲಾಗಿದೆ. ಈ ವೇಳೆ ಮಾತನಾಡಿದ ಖರ್ಗೆ, ನಾನು ಸಾಮಾನ್ಯದಿಂದ ಈ ಸ್ಥಾನದವರೆಗೂ ಬಂದಿದ್ದೀನಿ. ಪಕ್ಷದ ಸಿದ್ದಾಂತ ಒಪ್ಪಿ, ಅದಕ್ಕೆ ತಕ್ಕನಾಗಿ ಕೆಲಸ ಮಾಡ್ತೀನಿ ಅಂದ್ರೆ ಪಕ್ಷಕ್ಕೆ ಬನ್ನಿ. ಸ್ಥಾನಗಳ ಆಸೆ ಇಟ್ಕೊಂಡು ಕೆಲಸ ಮಾಡಬೇಡಿ. ಪಕ್ಷಕ್ಕೆ, ಅದರ ಸಿದ್ದಾಂತಕ್ಕೆ ನಿಷ್ಠರಾಗಿದ್ರೆ ಸ್ಥಾನಗಳು ತಾನಾಗೇ ಬರುತ್ತೆ ಅಂತ ಹೇಳಿದ್ದಾರೆ.ಜೊತೆಗೆ ಪದೇ ಪದೇ ಕಾಂಗ್ರೆಸ್‌ ನಾಯಕರನ್ನ ಗುರಿಯಾಗಿಸಿ ಮಾತಾನಾಡೋದು ಸರಿಯಲ್ಲ. ಗಾಂಧಿ ಕುಟುಂಬ ಈ ದೇಶಕ್ಕೆ ಬೇಕಾದಷ್ಟು ಕೊಡುಗೆ ಕೊಟ್ಟಿದೆ ಅಂತ ಬಿಜೆಪಿ ವಿರುದ್ದವೂ ವಾಗ್ದಾಳಿ ಮಾಡಿದಾರೆ. ಕರ್ನಾಟಕ ಚುನಾವಣೆ ನಮಗೆ ಮಹತ್ವದ ಚುನಾವಣೆ. ಗೆಲುವಿಗೆ ಎಲ್ಲರೂ ಪಣ ತೊಡೋಣ..ಮನೆಮನೆಗೆ ಕ್ಯಾಂಪೇನ್‌ ಮಾಡಬೇಕು ಅಂತ ಹೇಳಿದ್ದಾರೆ. ಇತ್ತ ಡಿಕೆ ಶಿವಕುಮಾರ್‌ ಮಾತನಾಡಿ ಖರ್ಗೆಯವರ ಕೈಕೆಳಗೆ ಕೆಲಸ ಮಾಡುವ ಅವಕಾಶ, ಭಾಗ್ಯ ನಮಗೆ ಸಿಕ್ಕಿದೆ. ಖರ್ಗೆಯವರ ತ್ಯಾಗದಿಂದ ಅವರಿಗೆ ಇಂತಹ ದೊಡ್ಡ ಸ್ಥಾನ ಸಿಕ್ಕಿದೆ ಅಂತ ಹೇಳಿದ್ರು. ಸಿದ್ದರಾಮಯ್ಯ ಮಾತನಾಡಿ ಖರ್ಗೆಯವರು ನಿಜಲಿಂಗಪ್ಪರ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೇರಿದ ಕನ್ನಡಿಗ. ಇದು ಏಳು ಕೋಟಿ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ ಅಂತ ಹೇಳಿದ್ರು

-masthmagaa.com

Contact Us for Advertisement

Leave a Reply