ಬ್ಲೂ ಫಿಲಂ ನೋಡುತ್ತಿದ್ದ ಪತಿ… ಬೇರೊಬ್ಬರ ಜೊತೆ ಪತ್ನಿ ಸೆಕ್ಸ್ ವಿಡಿಯೋ ಕಂಡು ಶಾಕ್​​..!

ಬೆಂಗಳೂರು: ವ್ಯಕ್ತಿಯೊಬ್ಬರು ಮನೆಯಲ್ಲಿ ಕುಳಿತು ನೀಲಿಚಿತ್ರ ನೋಡುತ್ತಿದ್ದರು. ಈ ವೇಳೆ ವಿಡಿಯೋವೊಂದರಲ್ಲಿ ತನ್ನ ಪತ್ನಿ ಪರ ಪುರುಷನ ಜೊತೆ ಸಂಬಂಧ ಬೆಳೆಸುತ್ತಿರುವ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಇದಾದ ಬಳಿಕ ವ್ಯಕ್ತಿ ತಮ್ಮ ಪತ್ನಿಯಿಂದ ದೂರವಾಗಿದ್ದಾರೆ. ಮಹಿಳೆ ಡಾಕ್ಟರ್ ಆಗಿದ್ದು, ಪತಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದರು. ಇಬ್ಬರೂ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.

33 ವರ್ಷದ ಪತಿ ಉತ್ತರ ಪ್ರದೇಶ ಮೂಲದವರಾಗಿದ್ದು, 32 ವರ್ಷದ ಪತ್ನಿ ಕೋಲ್ಕತ್ತಾ ಮೂಲದವರಾಗಿದ್ದಾರೆ. ಇಬ್ಬರೂ ಒಂದು ಮೆಟ್ರೋಮೋನಿಯಲ್ ವೆಬ್​ಸೈಟ್ ಮೂಲಕ ಸಂಪರ್ಕಕ್ಕೆ ಬಂದಿದ್ದರು. ನಂತರ 2018ರಲ್ಲಿ ಇಬ್ಬರೂ ಮದುವೆಯಾಗಿದ್ದರು. ಮಹಿಳೆ ಮದುವೆಗೂ ಮುನ್ನ ತನಗೆ ಬೇರೊಬ್ಬರ ಜೊತೆ ಸಂಬಂಧ ಇತ್ತು. ಆದ್ರೆ ಈಗ ಬ್ರೇಕಪ್ ಆಗಿದೆ ಅಂತ ಹೇಳಿಕೊಂಡಿದ್ದರು. ಇದನ್ನು ಒಪ್ಪಿಯೇ ವ್ಯಕ್ತಿ ಮಹಿಳೆಯನ್ನು ಮದುವೆಯಾಗಿದ್ದರು. ಆದ್ರೆ ಮಹಿಳೆ ಯಾವಾಗಲೂ ಪತಿಗೆ ನೀಲಿಚಿತ್ರ ನೋಡುವಂತೆ ಒತ್ತಡ ಹೇರುತ್ತಿದ್ದರು. ನಂತರದಲ್ಲಿ ಪತಿ ಕೂಡ ಆಕೆಯ ಮಾತು ಕೇಳಲು ಶುರು ಮಾಡಿದ್ದರು.

ಇದೇ ರೀತಿ ಒಂದಿನ ನೀಲಿಚಿತ್ರ ನೋಡುವಾಗ ಅವರ ಪತ್ನಿಯ ವಿಡಿಯೋ ನೋಡಿದ್ಧಾರೆ. ಪತ್ನಿ ಬೇರೊಬ್ಬರ ಜೊತೆ ಸಂಬಂಧ ಬೆಳೆಸಿದ್ದನ್ನು ಕಂಡು ಪತಿಗೆ ಶಾಕ್ ಆಗಿದೆ. ಆಗ ಪತ್ನಿ ಕೂಡ ಇದು ನನ್ನ ಹಳೆಯ ಪ್ರೇಮಿಯ ಜೊತೆಗಿನ ವಿಡಿಯೋ..ಆತ ನನ್ನನ್ನು ಯಾವಾಗಲೂ ಬ್ಲಾಕ್​ ಮೇಲ್ ಮಾಡ್ತಿದ್ದ. ಈಗ ವಿಡಿಯೋವನ್ನು ವೆಬ್​ಸೈಟ್​ಗೆ ಹಾಕಿದ್ದಾನೆ ಅಂತ ಹೇಳಿಕೊಂಡಿದ್ದಾರೆ. ಇದಾದ ಬಳಿಕವೂ ಪತಿ ಎಲ್ಲವನ್ನೂ ಸಹಿಸಿಕೊಂಡು ಸಂಸಾರ ನಡೆಸುತ್ತಿದ್ದರು.

ಆದ್ರೆ ಈ ವರ್ಷ ಅಂದ್ರೆ ಕಳೆದ ತಿಂಗಳು ಪತಿ ಮತ್ತೊಮ್ಮೆ ಪತ್ನಿಯ ವಿಡಿಯೋ ನೋಡಿದ್ದಾರೆ. ಈ ವಿಡಿಯೋದಲ್ಲಿ ಪತ್ನಿ ಮತ್ತೊಬ್ಬ ಪರಪುರುಷನ ಜೊತೆ ಲೈಂಗಿಕ ಸಂಬಂಧ ಬೆಳೆಸುತ್ತಿದ್ದರು. ಈ ಬಗ್ಗೆ ಪತ್ನಿಯನ್ನು ವಿಚಾರಿಸಿದಾಗ, ತಾನು ಮದುವೆಗೂ ಮುನ್ನ ಹಲವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೆ. ಈ ವಿಡಿಯೋ ಆನ್​​ಲೈನ್​​ಗೆ ಯಾರು ಹಾಕಿದ್ದಾರೋ ಗೊತ್ತಿಲ್ಲ ಅಂತ ಹೇಳಿದ್ದಾರೆ. ಇದ್ರಿಂದ ಬೇಸರವಾದ ಪತಿ ಪತ್ನಿಯನ್ನೇ ಬಿಟ್ಟು, ಏಕಾಂಗಿಯಾಗಿ ಬದುಕುತ್ತಿದ್ದಾರೆ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಪತ್ನಿ ಇದೀಗ ಕೋರ್ಟ್​ ಮೆಟ್ಟಿಲೇರಿದ್ದಾರೆ.

Contact Us for Advertisement

Leave a Reply