ಕೊರೋನಾದಿಂದ ಗುಣಮುಖರಾದವರಿಗೆ ಮತ್ತೆ ಸೋಂಕು ತಗುಲುವ ಸಾಧ್ಯತೆ ಎಷ್ಟಿರುತ್ತೆ ಗೊತ್ತಾ?

masthmagaa.com:

ಕೊರೋನಾ ಸೋಂಕು ಬಂದು ಗುಣಮುಖರಾದವರಿಗೆ ಮತ್ತೆ ಕೊರೋನಾ ವೈರಸ್ ತಗುಲಿರುವ ಹಲವು ಪ್ರಕರಣಗಳು ಇತ್ತೀಚೆಗೆ ವರದಿಯಾಗಿತ್ತು. ಒಂದುಸಲ ಕೊರೋನಾ ಬಂದು ಹೋದವರಿಗೆ ಮತ್ತೆ ಕೊರೋನಾ ಸೋಂಕು ತಗುಲುವ ಸಾಧ್ಯತೆ ಬಗ್ಗೆ ಐಸಿಎಂಆರ್​ನ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ ಒಂದಷ್ಟು ಮಾಹಿತಿ ನೀಡಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ‘ಕೊರೋನಾದಿಂದ ಗುಣಮುಖರಾದವರ ದೇಹದಲ್ಲಿ 5 ತಿಂಗಳ ಒಳಗಾಗಿ ವೈರಾಣು ವಿರುದ್ಧ ಹೋರಾಡುವ ಪ್ರತಿಕಾಯಗಳು ಅಥವಾ ರೋಗ ನಿರೋಧಕ ಶಕ್ತಿ ಕಡಿಮೆಯಾದ್ರೆ ಅಂಥವರಿಗೆ ಮತ್ತೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೊರೋನಾದಿಂದ ಗುಣಮುಖರಾದವರೂ ಕೂಡ ಮಾಸ್ಕ್ ಧರಿಸುವ ಮೂಲಕ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕು’ ಎಂದಿದ್ದಾರೆ. ಇಲ್ಲಿ ಬಲರಾಮ್ ಭಾರ್ಗವ ಅವರು 5 ತಿಂಗಳು ಅಂದಿರೋದು ಗಮನಾರ್ಹ. ಅಂದ್ರೆ ಕೊರೋನಾದಿಂದ ಗುಣಮುಖರಾದವರ ದೇಹದಲ್ಲಿ 5 ತಿಂಗಳ ನಂತರವೂ ವೈರಾಣು ವಿರುದ್ಧ ಪ್ರತಿಕಾಯಗಳು ಇದ್ದರೆ ಅಂಥವರಿಗೆ ಮತ್ತೆ ಸೋಂಕು ತಗುಲಲ್ಲ ಅನ್ನೋ ರೀತಿ ಇದೆ. ಜೊತೆಗೆ ಗುಣಮುಖರಾದವರಿಗೆ 5 ತಿಂಗಳ ನಂತರವೂ ಸೋಂಕು ತಗುಲಿಲ್ಲ ಅಂದ್ರೆ ಅಂಥವರಿಗೆ ಶಾಶ್ವತವಾಗಿ ಮತ್ತೊಮ್ಮೆ ಕೊರೋನಾ ಬರೋದಿಲ್ಲ ಅನ್ನೋ ರೀತಿ ಇದೆ.

-masthmagaa.com

Contact Us for Advertisement

Leave a Reply