ಅಮೆರಿಕನ್ ಯೋಧರ ಆತ್ಮಹತ್ಯೆ ಸರಣಿ! ಯಾಕೆ ಹೀಗೆ?

masthmagaa.com:

ವಿಶ್ವದ ದೊಡ್ಡಣ್ಣ, ಪ್ರಜಾಪ್ರಭುತ್ವದ ಟೀಚರ್ ಅಮೆರಿಕದಲ್ಲಿ ಸೈನಿಕರ ಆತ್ಮಹತ್ಯೆ ಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಿದೆ. ಸೇನೆಯಲ್ಲಿ ಕೊರೋನಾಗಿಂತ ಆತ್ಮಹತ್ಯೆ ಮಾಡ್ಕೊಂಡು ಪ್ರಾಣ ಬಿಡ್ತಿರೋರ ಸಂಖ್ಯೆನೇ ಜಾಸ್ತಿ ಇದೆ. 2021ರ ಮೂರನೇ ತ್ರೈಮಾಸಿಕದಲ್ಲಿ ಅಂದ್ರೆ ಜುಲೈನಿಂದ ಸೆಪ್ಟೆಂಬರ್​ವರೆಗೆ 163 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದೇ ಅಮೆರಿಕ ಸೇನೆಯಲ್ಲಿ ಈವರೆಗೆ ಕೊರೋನಾ ಶುರುವಾದಲ್ಲಿಂದ ಈವರೆಗೆ ಮಹಾಮಾರಿಗೆ ಬಲಿಯಾಗಿರೋರು 83 ಮಂದಿ ಮಾತ್ರ.. 2021ರ ಇಡೀ ವರ್ಷದಲ್ಲಿ 639 ಸೈನಿಕರು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. 2020ರಲ್ಲಿ ಇದಕ್ಕಿಂತ ಜಾಸ್ತಿ ಅಂದ್ರೆ 701 ಮಂದಿ ಸೈನಿಕರು ಆತ್ಮಹತ್ಯೆಗೆ ಶರಣಾಗಿದ್ರು. ಅಮೆರಿಕದ ಬ್ರೌನ್ ಮತ್ತು ಬೋಸ್ಟನ್ ವಿವಿ ಕಡೆಯಿಂದ ಯುದ್ಧಕ್ಕೆ ಸಂಬಂಧಿಸಿದ ಸಂಶೋಧನೆ ನಡೆಸಿದ್ದು, ಸೆಪ್ಟೆಂಬರ್ 11ರ ದಾಳಿಯ ಬಳಿಕ ಅಮೆರಿಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ಯೋಧರ ಮಾಹಿತಿ ನೀಡಿವೆ. ಇದ್ರ ಪ್ರಕಾರ ವರ್ಲ್ಡ್​ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆದ ಬಳಿಕ 30,177 ಮಂದಿ ಅಮೆರಿಕನ್ ಸೈನಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಇದೇ ಅವಧಿಯಲ್ಲಿ ಯುದ್ಧದಲ್ಲಿ 7057 ಮಂದಿ ಯೋಧರು ಪ್ರಾಣ ಬಿಟ್ಟಿದ್ದಾರೆ. ಇದ್ರ ಬೆನ್ನಲ್ಲೇ ಎಚ್ಚೆತ್ತಿರುವ ಅಮೆರಿಕ ಸರ್ಕಾರ ಯೋಧರ ಆತ್ಮಹತ್ಯೆಯ ಪ್ರಕರಣಗಳನ್ನು ಕಡಿಮೆ ಮಾಡಲು ವಿವಿಧ ಕ್ರಮಗಳನ್ನು ಕೈಗೊಳ್ತಿದೆ. ಕೌನ್ಸೆಲಿಂಗ್​​ ಶುರು ಮಾಡಿದೆ. ಯಾವ ಸೈನಿಕರು ಮಾನಸಿಕವಾಗಿ ಫಿಟ್ ಇಲ್ಲ ಅಂತ ಅನ್ನಿಸುತ್ತೋ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗ್ತಿದೆ. ಜೊತೆಗೆ ಅವರಿಂದ ಶಸ್ತ್ರಾಸ್ತ್ರಗಳನ್ನು ಕೂಡ ದೂರ ಇಡಲಾಗ್ತಿದೆ. ಅಂದಹಾಗೆ ಅಮೆರಿಕ ಸೇನೆಯಲ್ಲಿ 22,45,500 ಮಂದಿ ಯೋಧರಿದ್ದಾರೆ.

-masthmagaa.com

Contact Us for Advertisement

Leave a Reply