masthmagaa.com:

ಕೊರೋನಾ ಹಾವಳಿ ಹಿನ್ನೆಲೆ ದೇಶದ ಒಟ್ಟು ದೇಶೀಯ ಉತ್ಪನ್ನ (GDP) ಸತತ ಎರಡನೇ ತ್ರೈಮಾಸಿಕದಲ್ಲೂ ಋಣಾತ್ಮಕ ಬೆಳವಣಿಗೆ ಕಂಡಿದೆ. ಈ ಮೂಲಕ ದೇಶದ ಆರ್ಥಿಕತೆ ಅಧಿಕೃತವಾಗಿ ಟೆಕ್ನಿಕಲ್ ರಿಸೆಷನ್​ಗೆ ಜಾರಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಮೈನಸ್ 7.5% ಅಂತ ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫಿಸ್ ತಿಳಿಸಿದೆ. ಏಪ್ರಿಲ್​-ಜೂನ್ ತ್ರೈಮಾಸಿಕದ ಜಿಡಿಪಿ ದರ ಮೈನಸ್ 23.9% ಇತ್ತು. ಈ ಪ್ರಮಾಣದಲ್ಲಿ ಜಿಡಿಪಿ ಕುಸಿದಿದ್ದು ಕಳೆದ 40 ವರ್ಷದಲ್ಲೇ ಮೊದಲಾಗಿತ್ತು. ಏಪ್ರಿಲ್​-ಜೂನ್ ತ್ರೈಮಾಸಿಕಕ್ಕೆ ಹೋಲಿಸಿದ್ರೆ ಜುಲೈ-ಸೆಪ್ಟೆಂಬರ್ ಜಿಡಿಪಿ ಪರವಾಗಿಲ್ಲ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ GDP ಬೆಳವಣಿಗೆ ದರ ಮೈನಸ್​ 8.8%ಗೆ ಹೋಗಲಿದೆ ಅಂತ ರಾಯ್ಟಿರ್ಸ್ ಮತ್ತು ಮೈನಸ್ 8.2%ಗೆ ಹೋಗಲಿದೆ ಅಂತ ಬ್ಲೂಮ್​ಬರ್ಗ್ ಅಂದಾಜಿಸಿತ್ತು. ಆದ್ರೀಗ 7.5% ಅಂತ ಅಧಿಕೃತವಾಗಿ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply