ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಕರ್ನಾಟಕವೇ ನಂಬರ್ 1

masthmagaa.com:

ದೇಶದಲ್ಲಿರೋ ಖಾಸಗಿ ಮೆಡಿಕಲ್​ ಕಾಲೇಜುಗಳಲ್ಲಿ ಅತಿಹೆಚ್ಚು ಇರೋದು ಕರ್ನಾಟಕದಲ್ಲಿ ಅಂತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ಸದ್ಯ ದೇಶದಲ್ಲಿ 276 ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಅದರಲ್ಲಿ ಕರ್ನಾಟಕ ಒಂದರಲ್ಲೇ 42 ಇದೆ.

ಇದನ್ನ ಬಿಟ್ರೆ ಮಹಾರಾಷ್ಟ್ರದಲ್ಲಿ 32, ಉತ್ತರಪ್ರದೇಶದಲ್ಲಿ 31, ತಮಿಳುನಾಡಿನಲ್ಲಿ 27 ಇದೆ. 10 ರಾಜ್ಯದಲ್ಲಿ ಒಂದೇ ಒಂದು ಪ್ರೈವೇಟ್​ ಮೆಡಿಕಲ್ ಕಾಲೇಜು ಇಲ್ಲ. ಒಟ್ಟು 276 ಕಾಲೇಜುಗಳಲ್ಲಿ 82 ಕಾಲೇಜುಗಳು 2014ರ ಬಳಿಕ ಸ್ಥಾಪನೆಯಾಗಿದೆ. ಇವೆಲ್ಲವೂ ನ್ಯಾಷನಲ್ ಮೆಡಿಕಲ್ ಕಮಿಷನ್ (NMC) ನೀಡಿದ ಮಾಹಿತಿ ಆಧಾರಿತ ಅಂತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

-masthmagaa.com

Contact Us for Advertisement

Leave a Reply