ಕೊರೋನಾದ ಪ್ರಮುಖ ಕೇಂದ್ರವಾಗಲಿದ್ಯಂತೆ ಭಾರತ..!

masthmagaa.com:

ದೆಹಲಿ: ಈಗಾಗಲೇ ಕೊರೋನಾ ವೈರಸ್ ಭಾರತಕ್ಕೆ ಬಂದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈ ನಡುವೆ ಆರೋಗ್ಯ ತಜ್ಞ ಡಾ.ಜೇಕಬ್ ಜಾನ್​​​​​​​​​​​ ಜನರ ಭಯವನ್ನು ಮತ್ತಷ್ಟು ಹೆಚ್ಚಿಸುವ ಹೇಳಿಕೆ ಕೊಟ್ಟಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​ ಸೆಂಟರ್​​ನ ಮಾಜಿ ಮುಖ್ಯಸ್ಥರಾಗಿರುವ ಇವರು,  ಮುಂದಿನ ದಿನಗಳಲ್ಲಿ ಭಾರತ ಕೊರೋನಾ ವೈರಸ್​​​ನ ಪ್ರಮುಖ ಕೇಂದ್ರವಾಗಲಿದೆ. ಚೀನಾ, ಇಟಲಿ, ಇರಾನ್ ಬಳಿಕ ಭಾರತದಲ್ಲೇ ಹೆಚ್ಚಾಗಿ ಕೊರೋನಾ ವೈರಸ್ ಪ್ರಭಾವ ಬೀರಲಿದೆ ಅಂತ ಹೇಳಿದ್ದಾರೆ.

ಯಾಕಂದ್ರೆ ಕೊರೋನಾ ಎದುರಿಸಲು ಭಾರತದ ಸಿದ್ಧತೆ ಉಳಿದ ದೇಶಗಳಿಗೆ ಹೋಲಿಸಿದ್ರೆ ಅಪೂರ್ಣವಾಗಿದೆ. ಜೊತೆಗೆ ಭಾರತದ ವಾತಾವರಣ ಮತ್ತು ಜನಸಂಖ್ಯೆ ಕೊರೋನಾ ವೈರಸ್ ತುಂಬಾ ವೇಗವಾಗಿ ಹರಡಲು ಕಾರಣವಾಗಿದೆ. ಜನ ಕೂಡ ಚಿಕಿತ್ಸೆ ಮತ್ತು ನಿರ್ಬಂಧದ ಭಯದಿಂದ ಓಡ್ತಿದ್ದಾರೆ ಅಂತ ಹೇಳಿದ್ದಾರೆ.

ದೇಶದಲ್ಲಿ ಈಗ ನಿಧಾನಗತಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ರೀತಿ ಮುಂದುವರಿದ್ರೆ ಏಪ್ರಿಲ್ 15ರ ವೇಳೆಗೆ ಕೊರೋನಾ ಪೀಡಿತರ ಸಂಖ್ಯೆ 10ರಿಂದ 15 ಪಟ್ಟು ಹೆಚ್ಚಾಗಲಿದೆ ಅಂತ ಡಾ.ಜೇಕಬ್ ಜಾನ್ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply