ಅಮೆರಿಕ ನೇತೃತ್ವದ IPEFನ ವ್ಯಾಪಾರ ಮಾತುಕತೆಯಿಂದ ಭಾರತ ದೂರ!

masthmagaa.com:

ಅಮೆರಿಕ ನೇತೃತ್ವದ ಏಷ್ಯನ್‌ ರಾಷ್ಟ್ರಗಳ ಒಪ್ಪಂದ IPEFನ ಟ್ರೇಡ್‌ ಟಾಕ್ಸ್‌ ಅಂದ್ರೆ ವ್ಯಾಪಾರ ಮಾತುಕತೆಗಳಿಂದ ಭಾರತ ದೂರ ಉಳಿದಿದೆ. ಆದ್ರೆ ಅದ್ರ ಉಳಿದ ಕ್ಷೇತ್ರಗಳಾದ ಕ್ಲೀನ್‌ ಎನರ್ಜಿ, ಸಪ್ಲೈ ಚೈನ್‌ ಮುಂತಾದವುಗಳಲ್ಲಿ ಮುಂದುವರೆಯೋದಾಗಿ ಹೇಳಿದೆ. 14 ದೇಶಗಳ ಈ IPEF ಅಂದ್ರೆ ಇಂಡೋ-ಪೆಸಿಫಿಕ್‌ ಎಕಾನಮಿ ಫ್ರೇಮವರ್ಕ್‌ ಬೈಡನ್‌ರ ಕನಸಿನ ಯೋಜನೆಯಾಗಿದೆ. ಏಷ್ಯನ್‌ ರಾಷ್ಟ್ರಗಳೊಂದಿಗೆ ವ್ಯಾಪಾರ, ಹವಮಾನ ಬದಲಾವಣೆ, ಸಪ್ಲೈ ಚೈನ್ಸ್‌ ಅಂದ್ರೆ ಪೂರೈಕೆ ಸರಪಳಿ ಮತ್ತು ತೆರಿಗೆ ವಿಚಾರದಲ್ಲಿ ಸಂಬಂಧ ಗಟ್ಟಿಗೊಳಿಸೋದು ಇದ್ರ ಉದ್ದೇಶವಾಗಿದೆ. ಆದ್ರೆ ಅದಕ್ಕಿಂತ ಇಂಪಾರ್ಟೆಂಟ್‌ ಪರೋಕ್ಷ ಉದ್ದೇಶ ಅಂದ್ರೆ ಇಂಡೋ-ಫೆಸಿಫಿಕ್‌ ಭಾಗದಲ್ಲಿ ಚೀನಾದ ಪ್ರಭಾವಕ್ಕೆ ಕಡಿವಾಣ ಹಾಕೋದು. ಈ 14 ದೇಶಗಳಲ್ಲಿ ಭಾರತ ಮಾತ್ರ ಈ ವ್ಯಾಪಾರ ಒಪ್ಪಂದ ಮಾತುಕತೆಗೆ ಸಹಿ ಹಾಕಿಲ್ಲ. ಒಂದ್ವೇಳೆ ಸಹಿ ಮಾಡಿದ್ರೆ ಭಾರತದ ಮಾರುಕಟ್ಟೆ ಈ ರಾಷ್ಟ್ರಗಳಿಗೆ ಮುಕ್ತವಾಗುತ್ತೆ ಅನ್ನೋದು ಭಾರತದ ಆತಂಕ. 2019ರಲ್ಲಿ ಕೂಡ ಚೀನಾ ನೇತೃತ್ವದ RCEP, Regional Comprehensive Economic Partnershipನಿಂದ ಹೊರ ನಡೆಯೋವಾಗ ಕೂಡ ಭಾರತ ಇದೇ ರೀತಿ ಮಾಡಿತ್ತು. ಇದೇ ವರ್ಷ ಮೇ 23ರಂದು ಲಾಂಚ್‌ ಆದ ಮೇಲೆ ಇದೇ ಮೊದಲ ಬಾರಿಗೆ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ IPEF ಸಭೆ ಸೇರಿತ್ತು. ಇನ್ನು ಈ ವೇಳೆ ಮಾತಾಡಿದ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯೆಲ್‌, ಟ್ರೇಡ್‌ ಕಮಿಟ್‌ಮೆಂಟ್ಸ್‌ನಿಂದ ಭಾರತಕ್ಕೆ ಆಗೋ ಲಾಭಗಳ ಬಗ್ಗೆ ಸ್ಪಷ್ಟತೆ ಇಲ್ಲ. ಅಭಿವೃದ್ಧಿ ಹೊಂದ್ತಾ ಇರೋ ದೇಶಕ್ಕೆ ಅಪಾಯ ಒಡ್ಡೋ ಕಂಡಿಷನ್‌ಗಳನ್ನ ಅವಾಯ್ಡ್‌ ಮಾಡ್ತೀವಿ. IPEFನ ಒಟ್ಟಾರೆ ಔಟ್‌ಲೈನ್‌, ರೂಪುರೇಷೆ ಸಿಕ್ಮೇಲೆ ಟ್ರೇಡ್‌ ಟಾಕ್ಸ್‌ನಲ್ಲಿ ಭಾಗಿಯಾಗೋ ಬಗ್ಗೆ ನೋಡ್ತಿವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply