ನಾವು ಭಾರತಕ್ಕಿಂತ ತುಂಬಾ ಹಿಂದೆ ಬಿದ್ದಿದ್ದೀವಿ ಎಂದ ಅಮೆರಿಕ! ಯಾವುದರಲ್ಲಿ ಗೊತ್ತಾ?

masthmagaa.com:

ಅಮೆರಿಕಾ ಟೆಕ್ನಾಲಜಿ ತುಂಬಾ ಇಂಪ್ರೂವ್‌ ಆಗಿರ್ಬೋದು. ಆದ್ರೆ ಹೈಪರ್‌ ಸಾನಿಕ್‌ ಮಿಸೈಲ್‌ಗಳ ಅಭಿವೃದ್ದಿಯಲ್ಲಿ ರಷ್ಯಾ, ಚೀನಾ, ಭಾರತಕ್ಕಿಂತ ನಾವು ಹಿಂದೆ ಇದ್ದೀವಿ ಅಂತ ಸ್ವತಃ ಅಮೆರಿಕನ್‌ ಸೆನೆಟರ್‌ಗಳು ಅಭಿಪ್ರಾಯ ಪಟ್ಟಿದ್ದಾರೆ…. ಈ ಬಗ್ಗೆ ಮಾತನಾಡಿರುವ ಸೆನೆಟ್ ನ ಆರ್ಮಡ್‌ ಸರ್ವೀಸ್‌ ಕಮಿಟಿಯ ಚೇರ್ಮನ್‌ ಜಾಕ್‌ ರೀಡ್‌ ನಾವು ಕೆಲವು ಟೆಕ್ನಾಲಜಿಗಳಲ್ಲಿ ಮಂದಿರ್ಬೋದು, ಆದ್ರೆ ಹೈಪರ್‌ ಸಾನಿಕ್‌ ಕ್ಷೇತ್ರದಲ್ಲಿ ರಷ್ಯಾ, ಚೀನಾ, ಹಾಗು ಭಾರತದಷ್ಟು ಮುಂದೆ ಬಂದಿಲ್ಲ. ನಾವು ಈಗಲೇ ಎಚ್ಚೆತ್ತುಕೊಳ್ಳಲಿಲ್ಲ ಅಂದ್ರೆ ಇದರ ಅಡ್ವಾಂಟೇಜ್‌ಗಳನ್ನ ಆ ಮೂರು ರಾಷ್ಟ್ರಗಳು ಕೂಡ ಪಡೆದುಕೊಳ್ತವೆ ಅಂತ ಹೇಳಿದ್ದಾರೆ. ಅಲ್ದೇ ಇತಿಹಾಸದಲ್ಲಿ ಮೊದಲ ಬಾರಿಗೆ ಮೂರು ರಾಷ್ಟ್ರಗಳ ನಡುವೆ ಅಣ್ವಸ್ತ್ರ ಪೈಪೋಟಿ ಏರ್ಪಡ್ತಿದೆ ಅಂತ ಚೀನಾ, ರಷ್ಯಾ, ಅಮೆರಿಕಾವನ್ನ ಉಲ್ಲೇಖಿಸಿದ್ದಾರೆ. ಇನ್ನು ಮತ್ತೊಬ್ಬ ಅಧಿಕಾರಿ ವಿಲಿಯಂ ಲಾಪ್ಲೇಂಟ್ ಮಾತನಾಡಿ, “ಚೀನಾನೇ ನಮಗೆ ಮೊದಲ ಸಮಸ್ಯೆ ಸಮಸ್ಯೆ” ಅಂತ ಪುನರುಚ್ಛಾರ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply