masthmagaa.com:

ಇನ್ನೊಂದು ತಿಂಗಳಲ್ಲಿ ಆಕ್ಸ್‌ಫರ್ಡ್‌ ಲಸಿಕೆಯ ಸುಮಾರು 10 ಕೋಟಿ ಡೋಸ್​ಗಳು ಭಾರತಕ್ಕೆ ಲಭ್ಯವಾಗುತ್ತೆ ಅಂತ ಭಾರತದಲ್ಲಿ ಈ ಲಸಿಕೆ ಉತ್ಪಾದಿಸುತ್ತಿರುವ ಸೀರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಮುಖ್ಯಸ್ಥ ಆಡಾರ್‌ ಪೂನವಾಲಾ ಹೇಳಿದ್ದಾರೆ. ಮೂಲಗಳ ಪ್ರಕಾರ ಡಿಸೆಂಬರ್ ತಿಂಗಳಿನಲ್ಲೇ ಭಾರತದಲ್ಲಿ ಕೊರೋನಾ ಲಸಿಕೆ ಹಾಕುವ ಅಭಿಯಾನ ಕೂಡ ಶುರುವಾಗಲಿದೆ ಅಂತ ಹೇಳಲಾಗ್ತಿದೆ. ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು, ಯೋಧರು, ಹಿರಿಯರಿಗೆ ಲಸಿಕೆ ಹಾಕಲಾಗುತ್ತದೆ. ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಕಂಪನಿ ಸೇರಿಕೊಂಡು ತಯಾರಿಸುತ್ತಿರುವ ಈ ಲಸಿಕೆ ಇದುವರೆಗಿನ ಪ್ರಯೋಗಗಳಲ್ಲಿ ಪರಿಣಾಮಕಾರಿ ಅಂತ ಸಾಬೀತಾಗಿದೆ. ಈಗ ಅಂತಿಮ ಹಂತದ ಪ್ರಯೋಗ ನಡೆಯುತ್ತಿದೆ. ಈ ಅಂತಿಮ ಹಂತದಲ್ಲೂ ಯಶಸ್ವಿಯಾದ್ರೆ, ಭಾರತ ಸರ್ಕಾರ ಈ ಲಸಿಕೆಗೆ ತುರ್ತು ಅನುಮತಿ ಕೊಡುವ ಸಾಧ್ಯತೆ ಇದೆ. ಈ ವಿಚಾರವನ್ನ ಗಮನದಲ್ಲಿಟ್ಟುಕೊಂಡೇ ಸೀರಂ ಕಂಪನಿ ಆತ್ಮವಿಶ್ವಾಸದಿಂದ ಈಗಾಗಲೇ 4 ಕೋಟಿ ಡೋಸ್​ಗಳನ್ನ ಕಳೆದೆರಡು ತಿಂಗಳಲ್ಲಿ ತಯಾರಿಸಿ ಇಟ್ಟುಕೊಂಡಿದೆ. ಅನುಮೋದನೆ ಸಿಕ್ಕ ಒಂದು ತಿಂಗಳೊಳಗೆ 10 ಕೋಟಿ ಲಸಿಕೆ ಭಾರತಕ್ಕೆ ಸಿಗುತ್ತೆ ಅಂತ ಕಂಪನಿ ಹೇಳುತ್ತಿದೆ. ಅಂದ್ಹಾಗೆ ಆಕ್ಸ್‌ಫರ್ಡ್‌ ಲಸಿಕೆಯ ಉತ್ಪಾದನೆ ಮತ್ತು ಮಾನವ ಪ್ರಯೋಗದ ಬಗ್ಗೆ ಆಸ್ಟ್ರಾಝೆನೆಕಾ ಜೊತೆ ಸೀರಂ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಭಾರತದಲ್ಲಿ ಉತ್ಪಾದನೆಯಾಗುವ ಲಸಿಕೆಯ ಮೊದಲ ಹಕ್ಕು ಭಾರತಕ್ಕೇ ಇರುತ್ತದೆ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆಯ ‘ಕೋವಾಕ್ಸ್’‌ (COVAX) ಯೋಜನೆಗೆ ಭಾರತ ಸೇರಿರುವುದರಿಂದ 50:50 ಬೇಸಿಸ್‌ನಲ್ಲಿ ಶೇರ್‌ ಮಾಡಿಕೊಳ್ಳಬೇಕಾಗುತ್ತದೆ. ಜಗತ್ತಿನ ಬಡರಾಷ್ಟ್ರಗಳಿಗೂ ಲಸಿಕೆ ಪೂರೈಸುವ ಯೋಜನೆ ಈ ‘ಕೋವಾಕ್ಸ್’. ಅಂದ್ಹಾಗೆ ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಕಂಪನಿ ಸೇರಿಕೊಂಡು ತಯಾರಿಸುತ್ತಿರುವ ಈ ಲಸಿಕೆಗೆ ಭಾರತದಲ್ಲಿ ‘ಕೋವಿಶೀಲ್ಡ್​’ ಅಂತ ಹೆಸರಿಡಲಾಗಿದೆ. ಆಸ್ಟ್ರಾಝೆನೆಕಾ ಜೊತೆ ಸೀರಂ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕಂಪನಿಯು 1 ಕೋಟಿ ಲಸಿಕೆಯನ್ನ ಉತ್ಪಾದನೆ ಮಾಡಬಹುದಾಗಿದೆ.

-masthmagaa.com

Contact Us for Advertisement

Leave a Reply