ಕತಾರ್​ನಲ್ಲಿ ತಾಲಿಬಾನ್-ಭಾರತ ರಾಯಭಾರಿ ಭೇಟಿ!

masthmagaa.com:

ತಾಲಿಬಾನ್ ನಾಯಕರು ಕತಾರ್​ನಲ್ಲಿರೋ ಭಾರತದ ರಾಯಭಾರಿ ದೀಪಕ್ ಮಿತ್ಥಲ್ ಅವರನ್ನು ಭೇಟಿಯಾಗಿದ್ದಾರೆ. ಭಾರತ ಮತ್ತು ತಾಲಿಬಾನಿಗಳ ನಡುವಿನ ಮೊದಲ ಭೇಟಿ ಇದಾಗಿದೆ. ತಾಲಿಬಾನ್ ನಾಯಕರ ಮನವಿ ಮೇರೆಗೆ ಈ ಮೀಟಿಂಗ್ ಅರೇಂಜ್ ಮಾಡಲಾಗಿದೆ. ಕತಾರ್ ರಾಜಧಾನಿ ದೋಹಾದಲ್ಲಿರೋ ತಾಲಿಬಾನಿಗಳ ಪೊಲಿಟಿಕಲ್ ಆಫೀಸ್ ಹೆಡ್ ಶೇರ್ ಮೊಹ್ಮದ್ ಅಬ್ಬಾಸ್ ಸ್ಟಾನಿಕ್ ಝೈ ಭಾರತದ ರಾಯಭಾರಿ ಕಚೇರಿಗೆ ಬಂದು ಭೇಟಿಯಾಗಿದ್ದಾರೆ. ಈ ವೇಳೆ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ನಾಗರಿಕರ ಭದ್ರತೆ ಮತ್ತು ಸುರಕ್ಷಿತವಾಗಿ ಸ್ಥಳಾಂತರ, ಅಲ್ಲಿರೋ ಹಿಂದೂ, ಸಿಖ್ ಸೇರಿದಂತೆ ಅಲ್ಪಸಂಖ್ಯಾತರು ಭಾರತಕ್ಕೆ ಬರೋಕೆ ಬಯಸಿದ್ರೆ ಅವಕಾಶ ನೀಡಬೇಕು ಅನ್ನೋದರ ವಿಚಾರವಾಗಿ ಚರ್ಚಿಸಲಾಯ್ತು. ಈ ವೇಳೆ ಭಾರತದ ರಾಯಭಾರಿ ದೀಪಕ್ ಮಿತ್ಥಲ್​​​​, ಅಫ್ಘಾನಿಸ್ತಾನದ ನೆಲ ಭಾರತದ ವಿರೋಧಿ ಕೃತ್ಯಗಳಿಗೆ, ಭಯೋತ್ಪಾದನೆಗೆ ಬಳಕೆಯಾಗದಂತೆ ನೋಡಿಕೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ. ಅದಕ್ಕೆ ಸೇಋ್ ಮೊಹ್ಮದ್ ಅಬ್ಬಾಸ್ ಸ್ಟಾನಿಕ್ ಝೈ ಕೂಡ, ಎಲ್ಲಾ ಸಮಸ್ಯೆಗಳನ್ನು ಪಾಸಿಟಿವ್ ರೀತಿಯಲ್ಲಿ ಪರಿಹರಿಸೋ ಭರವಸೆ ನೀಡಿದ್ದಾರೆ. ಭಾರತದ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿ, ಈ ಎಲ್ಲಾ ಮಾಹಿತಿ ನೀಡಿದೆ. ಅಂದಹಾಗೆ ಕಳೆದ ಐದಾರು ತಿಂಗಳಿಂದ ಕತಾರ್​ನ ದೋಹಾದಲ್ಲಿ ಭಾರತ ಮತ್ತು ತಾಲಿಬಾನಿಗಳ ಪ್ರತಿನಿಧಿಗಳೊಂದಿಗೆ ಗೌಪ್ಯವಾಗಿ ಮಾತುಕತೆ ನಡೀತಾ ಇದೆ ಅಂತ ಆರೋಪ ಕೇಳಿ ಬಂದಿತ್ತು. ಆದ್ರೆ ಸರ್ಕಾರದ ಕಡೆಯಿಂದ ಈ ಬಗ್ಗೆ ಇದೇ ಮೊದಲ ಬಾರಿಗೆ ಕನ್ಫರ್ಮೇಷನ್ ಸಿಕ್ಕಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಅಂದ್ರೆ ಭಾರತದಲ್ಲಿ ಬಿಜೆಪಿ ನಾಯಕರು ಸ್ಥಳೀಯವಾಗಿ ತಾಲಿಬಾನಿಗಳನ್ನು ಬೈತಿದ್ದಾರೆ ಬಿಟ್ರೆ, ಕೇಂದ್ರ ಸರ್ಕಾರ ಅಧಿಕೃತವಾಗಿ ತಾಲಿಬಾನಿಗಳ ವಿರುದ್ಧ ಒಂದೇ ಒಂದು ಹೇಳಿಕೆ ನೀಡಿಲ್ಲ.
ಅಪ್ಘನಿಸ್ತಾನ ಪರಿಸ್ಥಿತಿ ಕುರಿತು ಭಾರತದ ತಕ್ಷಣ ಪ್ರೈಯಾರಿಟಿ ಬಗ್ಗೆ ಫೋಕಸ್ ಮಾಡುವಂತೆ ವಿದೇಶಾಂಗ ಸಚಿವ ಎಸ್​.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಹಿರಿಯ ಅಧಿಕಾರಿಗಳನ್ನೊಳಗೊಂಡ ಹೈಲೆವೆಲ್​ ಗ್ರೂಪ್​​ಗೆ ಪ್ರಧಾನಿ ಮೋದಿ ಸೂಚನೆ ಕೊಟ್ಟಿದ್ದಾರೆ ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply