ಶೂ ಪಾಲಿಶ್ ಮಾಡ್ತಿದ್ದ ಯುವಕ ಈಗ ಇಂಡಿಯನ್ ಐಡಲ್ ವಿನ್ನರ್​​..!

ಒಂದು ಕಾಲದಲ್ಲಿ ಶೂ ಪಾಲಿಶ್ ಮಾಡ್ತಿದ್ದ ಯುವಕ ಈಗ ಇಂಡಿಯನ್ ಐಡಲ್ ಸೀಸನ್ 11ರ ವಿನ್ನರ್ ಆಗಿದ್ದಾರೆ. ಸನಿ ಹಿಂದೂಸ್ತಾನಿ ಆರ್ಥಿಕ ಸಮಸ್ಯೆಯಿಂದಾಗಿ ಶೂ ಪಾಲಿಶ್ ಮಾಡೋ ಕೆಲಸ ಮಾಡ್ತಿದ್ರು. ಇವರ ತಾಯಿ ಅವರಿವರ ಮನೆ ಕೆಲಸ ಮಾಡಿ ಕುಟುಂಬದ ನಿರ್ವಹಣೆ ಮಾಡ್ತಿದ್ರು. ಇಂಥಾ ಸನಿ ಹಿಂದೂಸ್ತಾನಿಗೆ ಇಂಡಿಯನ್ ಐಡಲ್​​ನಲ್ಲಿ ಭಾಗಿಯಾಗುವ ಅವಕಾಶ ಸಿಕ್ತು. ಇದೀಗ ತಮ್ಮ ಅದ್ಭುತ ಕಂಠದಿಂದ ಇಂಡಿಯನ್ ಐಡಲ್ 11ನೇ ಸೀಜನ್​​​​​ನಲ್ಲಿ ವಿನ್ನರ್ ಆಗಿದ್ದಾರೆ. ಈಗಾಗಲೇ ಕಂಗನಾ ಅಭಿನಯದ ಪಂಗಾ ಸಿನಿಮಾದಲ್ಲಿ ಹಾಡು ಹಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸನಿ ಹಿಂದೂಸ್ತಾನಿ, ನಾನು ಇಂಡಿಯನ್ ಐಡಲ್​​​ಗೆ ಯಾವ ಕನಸು ಹೊತ್ತು ಬಂದಿದ್ನೋ ಅದು ಈಡೇರಿದೆ. ನನ್ನ ತಾಯಿಯ ಮುಖದಲ್ಲಿ ಸಂತಸ ನೋಡಿ ನನಗೂ ಖುಷಿಯಾಯ್ತು. ಇಂಡಿಯನ್ ಐಡಲ್ ನನ್ನ ಜೀವನವನ್ನು ಬದಲಿಸಿತು ಎಂದಿದ್ದಾರೆ.

https://twitter.com/SonyTV/status/1231648025115627521

Contact Us for Advertisement

Leave a Reply