ಕೊರೋನಾ​​​​​​ಗೆ ಭಾರತದಲ್ಲಿ ಮೊದಲ ಬಲಿ..? ಕೇರಳದ ವ್ಯಕ್ತಿ ಸಾವಿಗೆ ಕಾರಣವೇನು..?

ಕೇರಳ: ಕೊರೋನಾವೈರಸ್ ಅತಿ ವೇಗವಾಗಿ ಹರಡುತ್ತಿರುವ ಮಲೇಷಿಯಾದಿಂದ ಇತ್ತೀಚೆಗಷ್ಟೇ ವಾಪಸ್ ಆಗಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕೊರೋನಾವೈರಸ್​​ನಿಂದ ಬಳಲುತ್ತಿರುವ ಶಂಕೆ ಮೇರೆಗೆ ವ್ಯಕ್ತಿಗೆ ಎರ್ನಾಕುಲಂನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಲೇಷಿಯಾದಲ್ಲಿ ಕೊರೋನಾವೈರಸ್ ಅತಿ ವೇಗವಾಗಿ ಹರಡುತ್ತಿದ್ದು, 25 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಆದ್ರೆ ಕೇರಳದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕೊರೋನಾ ವೈರಸ್ ಸೋಂಕಿನ ಬಗ್ಗೆ ಪರೀಕ್ಷೆ ನಡೆಸಿದಾಗ ನೆಗೆಟಿವ್​ ರಿಸಲ್ಟ್​ ಬಂದಿತ್ತು. ಆದ್ರೆ ಈ ವ್ಯಕ್ತಿ ಶ್ವಾಸಕೋಶ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ನ್ಯುಮೋನಿಯಾ ಮತ್ತು ಡಯಾಬಿಟಿಸ್ ಸಮಸ್ಯೆ ಕೂಡ ಇತ್ತು. ಹೀಗಾಗಿ ಆರೋಗ್ಯ ಇಲಾಖೆ ಇದೀಗ ಪುನಃ ಮೃತ ವ್ಯಕ್ತಿಯ ರಕ್ತದ ಸ್ಯಾಂಪಲ್​​ಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಹಿಂದೆ ಚೀನಾದಿಂದ ಮರಳಿದ್ದ 3 ಮಂದಿ ಕೇರಳದ ನಿವಾಸಿಗಳಲ್ಲಿ ಕೊರೋನಾವೈರಸ್ ಪತ್ತೆಯಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆ ಕೂಡ ನೀಡಲಾಗಿತ್ತು. ಇದ್ರಿಂದ ಅವರು ಆರೋಗ್ಯವಂತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

Contact Us for Advertisement

Leave a Reply