ನಾಕಾಪಡೆಗೆ ಸೇರಿದ ಪ್ರದೇಶದಲ್ಲಿ ಡ್ರೋನ್ ಹಾರಿಸಂಗಿಲ್ಲ!

masthmagaa.com:

ಜಮ್ಮು ಏರ್​​ಫೋರ್ಸ್​ ಸ್ಟೇಷನ್ ಮೇಲೆ ಡ್ರೋನ್​​ ಮೂಲಕ ದಾಳಿ ಬೆನ್ನಲ್ಲೇ ನೌಕಾಪಡೆ ಕೂಡಾ ಎಚ್ಚೆತ್ತುಕೊಂಡಿದೆ. ನೌಕಾನೆಲೆ, ನೌಕಾ ಘಟಕ ಮತ್ತು ನೌಕಾಪಡೆಗೆ ಸಂಬಂಧಿಸಿದ ಇತರೆ ಕೇಂದ್ರಗಳಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟವನ್ನು ನಿರ್ಬಂಧಿಸಿದೆ. ಬರೀ ಡ್ರೋನ್ ಅಲ್ಲ.. ಯಾವುದೇ ಕೃತಕ ವಸ್ತುಗಳು ಈ ಪ್ರದೇಶಗಳಲ್ಲಿ ಹಾರುವಂತಿಲ್ಲ. ಒಂದು ವೇಳೆ ಹಾರಾಟ ನಡೆಸಿದ್ರೆ ಅದನ್ನು ನಾಶಪಡಿಸಲಾಗುತ್ತೆ. ಅದೂ ಅಲ್ಲದೆ ಹೆಚ್ಚುವರಿಯಾಗಿ ಇದನ್ನು ಆಪರೇಟ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಅಂತ ರಕ್ಷಣಾ ಇಲಾಖೆ ತಿಳಿಸಿದೆ.

-masthmagaa.com

Contact Us for Advertisement

Leave a Reply