ಕೊರೋನಾ ವಿರುದ್ಧ ಭಾರತದ ಹೋರಾಟಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಮೆಚ್ಚುಗೆ

masthmagaa.com

ಕೊರೋನಾ ವಿರುದ್ಧ ಹೋರಾಡಲು ಭಾರತ ಸರ್ಕಾರ ತೆಗೆದುಕೊಳ್ಳತ್ತಿರುವ ಕ್ರಮಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​​​​ ಜೊತೆಗಿನ ಸಭೆಯ ಬಳಿಕ ಮಾತನಾಡಿದ ವಿಶ್ವಸಂಸ್ಥೆಯ ಭಾರತ ಪ್ರತಿನಿಧಿ ಹೆಂಕ್ ಬೆಕೆಡಮ್​​, ಭಾರತ ಸರ್ಕಾರ ಮತ್ತು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಉನ್ನತ ಮಟ್ಟದ ಬದ್ಧತೆ ಬಹಳ ಪ್ರಭಾವಶಾಲಿಯಾಗಿದೆ. ಇದೇ ಕಾರಣಕ್ಕಾಗಿ ಭಾರತ ಉತ್ತಮವಾಗಿ ಕೊರೋನಾ ವಿರುದ್ಧ ಹೋರಾಡುತ್ತಿದೆ ಅಂತ ನನಗೆ ಅನ್ನಿಸುತ್ತಿದೆ ಎಂದಿದ್ದಾರೆ.

ಭಾರತದಲ್ಲಿ ಅದರಲ್ಲೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ಡಿಪಾರ್ಟ್​​ಮೆಂಟ್ ಆಫ್ ಹೆಲ್ತ್ ರಿಸರ್ಚ್​​​ ಸಂಶೋಧನೆಯ ಸಾಮರ್ಥ್ಯ ಹೊಂದಿವೆ. ಭಾರತಕ್ಕೆ ವೈರಸ್ ಜೊತೆ ಹೋರಾಡುವ ಸಾಮರ್ಥ್ಯ ಹೊಂದಿದ್ದು, ಸಂಶೋಧನಾ ಸಮುದಾಯದ ಭಾಗವಾಗಿದೆ ಅಂತ ಹೇಳಿದ್ದಾರೆ.

masthmagaa.com

Contact Us for Advertisement

Leave a Reply