ಜಿಡಿಪಿ ಕುಸಿತ ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆ- ರಘುರಾಮ್ ರಾಜನ್

masthmagaa.com:

ದೆಹಲಿ: ಜಿಡಿಪಿ ಕುಸಿತಕ್ಕೆ ಆತಂಕ ವ್ಯಕ್ತಪಡಿಸಿರುವ ಆರ್​​ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್​, ಅಧಿಕಾರಿಗಳು ನಿದ್ದೆಯಿಂದೆದ್ದು ಆರ್ಥಿಕತೆ ಚೇತರಿಕೆಗೆ ಅರ್ಥಪೂರ್ಣ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ. ಈ ಬಗ್ಗೆ ತಮ್ಮ ಲಿಂಕ್ಡ್​ ಇನ್​ ಪೇಜ್​​ನಲ್ಲಿ ಬರೆದುಕೊಂಡಿರೋ ಅವರು, ಸದ್ಯದ ಪರಿಸ್ಥಿತಿ ನಿಭಾಯಿಸಲು ದೃಢ ಮತ್ತು ಕ್ರೀಯಾಶೀಲ ಸರ್ಕಾರದ ಅಗತ್ಯವಿದೆ. ಇಲ್ಲವಾದಲ್ಲಿ ಆರ್ಥಿಕ ಬೆಳವಣಿಗೆ ದರದ ಮೇಲೆ ಮತ್ತಷ್ಟು ಪರಿಣಾಮ ಉಂಟಾಗಲಿದೆ.. ಜಿಡಿಪಿ ಕುಸಿತ ಪ್ರತಿಯೊಬ್ಬರಿಗೂ ಎಚ್ಚರಿಕೆಯ ಕರೆಗಂಟೆ.. ಆರಂಭದಲ್ಲಿ ಕೊರೋನಾದಿಂದ ಹೆಚ್ಚು ಪ್ರಭಾವಿತರಾದ ಅಮೆರಿಕ ಮತ್ತು ಇಟಲಿಗಿಂತಲೂ ಭಾರತದ ಜಿಡಿಪಿ ಕೆಟ್ಟ ಸ್ಥಿತಿಯಲ್ಲಿದೆ ಅಂತ ಬರೆದಿದ್ದಾರೆ.

-masthmagaa.com

Contact Us for Advertisement

Leave a Reply