ವಿಶ್ವದ ಟಾಪ್​ ಸಾಂಕ್ರಾಮಿಕ ರೋಗ ತಜ್ಞನಿಗೂ ತಗುಲಿತು ಕೊರೋನಾ..!

masthmagaa.com:

ಬಡವ, ಶ್ರೀಮಂತ ಅನ್ನೋದನ್ನ ನೋಡದೆ ಮುನ್ನುಗ್ಗುತ್ತಿರೋ ಕೊರೋನಾ ವೈರಸ್​ ವಿಶ್ವದ ಟಾಪ್ ಸಾಂಕ್ರಾಮಿಕ ರೋಗ ತಜ್ಞ ಇಯಾನ್ ಲಿಪ್​ಕಿನ್ ಅವರನ್ನ ಕೂಡ ಬಿಟ್ಟಿಲ್ಲ. ಕೊರೋನಾ ವೈರಸ್​ ಕುರಿತು ಅಧ್ಯಯನ ನಡೆಸಲು ಚೀನಾಗೆ ಹೋಗಿ ಬಂದಿದ್ದ ಲಿಪ್​ಕಿನ್​ ಅವರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ.

ಕೊಲಂಬಿಯಾ ಯುನಿವರ್ಸಿಟಿಯ ಸೆಂಟರ್ ಫಾರ್ ಇನ್ಫೆಕ್ಷನ್​ ಮತ್ತು ಇಮ್ಯುನಿಟಿಯ ನಿರ್ದೇಶಕರಾಗಿರೋ ಇಯಾನ್​ ಲಿಪ್​ಕಿನ್​, ಅಮೆರಿಕದಲ್ಲಿ ಕಾಯಿಲೆಗಳ ಬಗ್ಗೆ ಮಾಹಿತಿ ನೀಡುವ ಪ್ರಮುಖ ಧ್ವನಿಯಾಗಿದ್ದರು. ಅಲ್ಲದೆ 2011ರಲ್ಲಿ ತೆರೆಕಂಡ ಕಿಲ್ಲರ್ ವೈರಸ್ ಕಥೆ ಆಧಾರಿತ ‘ಕಾಂಟ್ಯಾಜಿಯನ್’ ಚಿತ್ರದ ಸಲಹೆಗಾರರು ಕೂಡ ಆಗಿದ್ದರು.

ಜೊತೆಗೆ ವೆಸ್ಟ್​ಲೈನ್ ವೈರಸ್ ಹಾಗೂ ಸಾರ್ಸ್​ಗೆ ಸಂಬಂಧಿಸಿದ ವೈಜ್ಞಾನಿಕ ಅಧ್ಯಯನಗಳಲ್ಲಿ ಲಿಪ್​ಕಿನ್ ಪ್ರಮುಖ ಪಾತ್ರ ವಹಿಸಿದ್ದರು. ಜನವರಿ ತಿಂಗಳಲ್ಲಿ ಕೊರೋನಾ ವೈರಸ್​ ಬಗ್ಗೆ ಅಧ್ಯಯನ ನಡೆಸಲು ಚೀನಾಗೆ ಹೋಗಿದ್ದ ಇವರು ಈ ಕಾಯಿಲೆಗೆ ಔಷಧಿ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದರು. ಆದರೆ ಈಗ ಅವರಿಗೇ ಕೊರೋನಾ ಸೋಂಕು ತಗುಲಿರೋದು ಆತಂಕ ಹೆಚ್ಚಿಸಿದೆ.

ಈ ಬಗ್ಗೆ ಫಾಕ್ಸ್ ನ್ಯೂಸ್ ಜೊತೆ ಮಾತನಾಡಿರೋ ಇಯಾನ್ ಲಿಪ್​ಕಿನ್​, ಕೊರೋನಾ ಸೋಂಕು ನನಗೆ ತಗುಲಿದೆ ಎಂದಾದರೆ ಅದು ಯಾರಿಗೆ ಬೇಕಾದ್ರೂ ತಗುಲಬಹುದು ಅಂತ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply