ಸಾವರ್ಕರ್​ಗೆ ಯಾಕೆ ಭಾರತ ರತ್ನ..? ಗೋಡ್ಸೆಗೆ ಕೊಡಿ..!: ಕಾಂಗ್ರೆಸ್ ವ್ಯಂಗ್ಯ

ಮಹಾರಾಷ್ಟ್ರ ಚುನಾವಣೆ ಹತ್ತಿರ ಬಂದಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ ವೀರ ಸಾವರ್ಕರ್​​​​ಗೆ ಭಾರತ ರತ್ನ ನೀಡುವ ಬಗ್ಗೆ ಘೋಷಿಸಿದೆ. ಆದ್ರೆ ಇದು ಕಾಂಗ್ರೆಸ್ ಕಣ್ಣು ಕೆಂಪಗಾಗುವಂತೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಸಾವರ್ಕರ್​​​ಗೆ ಭಾರತ ರತ್ನ ನೀಡೋದಾದ್ರೆ, ಗೋಡ್ಸೆಗೆ ಯಾಕೆ ಕೊಡಬಾರದು ಎಂದು ಕೆಂಡಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸಾವರ್ಕರ್​​​ಗೆ ಭಾರತದ ರತ್ನ ನೀಡಲು ಮುಂದಾಗಿದೆ. ಗೋಡ್ಸೆಗೆ ಯಾಕೆ ನೀಡ್ತಿಲ್ಲ..? ಸಾವರ್ಕರ್ ಗಾಂಧಿ ಹತ್ಯೆಗೆ ಪಿತೂರಿ ನಡೆಸಿ, ಚಾರ್ಜ್​​ ಶೀಟ್ ಹಾಕಿಸಿಕೊಂಡ ಬಳಿಕ ಖುಲಾಸೆಗೊಂಡ್ರು. ಆದ್ರೆ ಗೋಡ್ಸೆ ವಿರುದ್ಧ ಗಾಂಧಿ ಹತ್ಯೆ ಆರೋಪ ಸಾಬೀತಾಗಿ ಗಲ್ಲಿಗೂ ಏರಿದ್ರು. ಗಾಂಧಿಯವರ 150ನೇ ಜನ್ಮ ದಿನ ಸಂಭ್ರಮದಲ್ಲಿ ಅವರಿಗೆ ಯಾಕೆ ಭಾರತ ರತ್ನ ಕೊಡಬಾರದು ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ಧಾರೆ.

Contact Us for Advertisement

Leave a Reply