ಕತಾರ್ ದೇಶದ ವಿಶೇಷತೆಗಳು ನಿಮಗೆ ಗೊತ್ತಾ..? ಅಬ್ಬಾ..ಒಂದಕ್ಕಿಂತ ಒಂದು…

ಹಾಯ್ ಫ್ರೆಂಡ್ಸ್.. ಕತಾರ್.. ಜಗತ್ತಿನ ಅತ್ಯಂತ ಶ್ರೀಮಂತ ದೇಶ. ಇಲ್ಲಿ ಯಥೇಚ್ಛವಾಗಿ ಸಿಗುವ ತೈಲ ಮತ್ತು ನೈಸರ್ಗಿಕ ಅನಿಲವೇ ಈ ದೇಶದ ಶ್ರೀಮಂತಿಕೆಯ ರಹಸ್ಯ. ಈ ದೇಶದಲ್ಲಿ ಒಬ್ಬ ವ್ಯಕ್ತಿಯ ತಲಾ ಆದಾಯ 1 ಲಕ್ಷದ 28 ಸಾವಿರ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 91 ಲಕ್ಷಕ್ಕೂ ಹೆಚ್ಚು. ಅಂದ್ರೆ ಒಂದು ವರ್ಷದಲ್ಲಿ ಒಬ್ಬ ವ್ಯಕ್ತಿ ಸರಾಸರಿ ಇಷ್ಟು ಹಣ ದುಡಿಯುತ್ತಾನೆ. ಇಲ್ಲಿನ ಅಧಿಕೃತ ಭಾಷೆ ಅರೇಬಿಕ್ ಆಗಿದ್ದರೂ ಇಂಗ್ಲಿಷ್ ಕೂಡ ಬಳಕೆಯಲ್ಲಿದೆ. ಮುಸ್ಲಿಂ ದೇಶವಾಗಿರುವ ಕತಾರ್ ನಲ್ಲಿ ಅನುವಂಶಿಕ ರಾಜಪ್ರಭುತ್ವವಿದೆ. ರಾಜನನ್ನ ಎಮೀರ್ ಅಂತ ಕರೆಯಲಾಗುತ್ತೆ. ಕತಾರ್ ನ ರಾಜಧಾನಿ ದೋಹ, ಕರೆನ್ಸಿ ರಿಯಲ್. ಚಿಕ್ಕ ದೇಶವಾದ ಕತಾರ್ ವಿಸ್ತೀರ್ಣದಲ್ಲಿ ವಿಶ್ವದಲ್ಲಿ 158ನೇ ಸ್ಥಾನದಲ್ಲಿದೆ. ದಕ್ಷಿಣದಲ್ಲಿ ಸೌದಿ ಅರೇಬಿಯಾ ಜೊತೆ ಗಡಿ ಹಂಚಿಕೊಂಡಿರುವ ಕತಾರ್ ಉಳಿದ ಮೂರು ಕಡೆ ಪರ್ಷಿಯನ್ ಕೊಲ್ಲಿಯಿಂದ ಸುತ್ತುವರಿಯಲ್ಪಟ್ಟಿದೆ.

ಮಹಿಳೆಯರಿಗಿಂತ ಪುರುಷರು ಮೂರು ಪಟ್ಟು ಹೆಚ್ಚು
ಹೌದು ಫ್ರೆಂಡ್ಸ್, ಕತಾರ್ ನಲ್ಲಿ ಸುಮಾರು 27 ಲಕ್ಷ ಜನ ವಾಸವಿದ್ದಾರೆ. ಅದರಲ್ಲಿ ಮಹಿಳೆಯರು ಇರೋದು ಬರೀ 7 ಲಕ್ಷ ಅಷ್ಟೇ. ಅಂದ್ರೆ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳ ಅನುಪಾತ ನೋಡಿದ್ರೆ ಸಾವಿರ ಗಂಡುಮಕ್ಕಳಿಗೆ ಜಸ್ಟ್ 250 ಹೆಣ್ಣುಮಕ್ಕಳು ಇದ್ದಾರೆ. ಮತ್ತೊಂದು ಸಾರಿ ರಿಪೀಟ್ ಮಾಡ್ತೀನಿ.. ಸಾವಿರ ಗಂಡುಮಕ್ಕಳಿಗೆ ಕೇವಲ 250 ಹೆಣ್ಣುಮಕ್ಕಳು.. ನಮ್ಮ ಭಾರತದಲ್ಲಿ ಸಾವಿರ ಗಂಡು ಮಕ್ಕಳಿಗೆ 930 ಹೆಣ್ಣು ಮಕ್ಕಳು ಇದ್ದಾರೆ. ಇದನ್ನೇ ನಾವೆಲ್ಲಾ ಕಮ್ಮಿ ಅಂತೀವಿ. ಅಂತರದಲ್ಲಿ ಕತಾರ್ ಕಥೆ ಹೇಗಿರಬೇಡ. ಕತಾರ್ ನಲ್ಲಿ ಇಷ್ಟು ಕಮ್ಮಿ ಲಿಂಗಾನುಪಾತ ಇರೋದಕ್ಕೂ ಕಾರಣವಿದೆ.. ಭಾರತ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಕೆಲಸ ಅರಸಿ ಕತಾರ್ ಗೆ ಬರುವವರಲ್ಲಿ ಗಂಡು ಮಕ್ಕಳೇ ಹೆಚ್ಚಿದ್ದಾರೆ. ಏಷ್ಟರಮಟ್ಟಿಗೆ ಅಂದ್ರೆ ಬರೋಬ್ಬರಿ 88 ಪರ್ಸೆಂಟ್ ಗೂ ಹೆಚ್ಚು ಜನ ವಲಸಿಗರೆ ಇದ್ದಾರೆ.

ಒಂದು ಕಾಲದಲ್ಲಿ ಬಡ ರಾಷ್ಟ್ರವಾಗಿದ್ದ ಕತಾರ್
ಯೆಸ್​​, ಸದ್ಯ ವಿಶ್ವದ ಅತ್ಯಂತ ಶ್ರೀಮಂತ ದೇಶ ಎನಿಸಿಕೊಂಡಿರುವ ಕತಾರ್ ಎರಡನೇ ಮಹಾಯುದ್ಧಕ್ಕೂ ಮುನ್ನ ತುಂಬಾ ಬಡವಾಗಿತ್ತು. ಮೀನುಗಾರಿಕೆ ಮತ್ತು ಹೇರಳವಾಗಿ ಸಿಗುತ್ತಿದ್ದ ಮುತ್ತು ಹವಳಗಳೆ ಆದಾಯದ ಮೂಲವಾಗಿತ್ತು. ಆದರೆ 1940ರ ದಶಕದಲ್ಲಿ ತೈಲ ನಿಕ್ಷೇಪಗಳನ್ನ ಕಂಡುಹಿಡಿದು ಅಭಿವೃದ್ಧಿಪಡಿಸಿದ ಬಳಿಕ ಕತಾರ್ ಶ್ರೀಮಂತ ದೇಶವಾಗುತ್ತಾ ಹೋಯ್ತು. ಇದರಿಂದ ಆಕಾರ್ಷಿತರಾದ ದಕ್ಷಿಣ ಏಷ್ಯಾ ರಾಷ್ಟ್ರಗಳ ಯುವಕರು ಕತಾರ್ ಗೆ ವಲಸೆ ಬಂದರು. ದೇಶದ ದುಡಿಯುವ ವರ್ಗದಲ್ಲಿ 94 ಪರ್ಸೆಂಟ್ ಜನ ವಿದೇಶಿಗರೆ ಆಗಿದ್ದಾರೆ. ಸದ್ಯ ಅತಿ ಹೆಚ್ಚು ತೈಲ ಮತ್ತು ನೈಸರ್ಗಿಕ ಅನಿಲ ಹೊಂದಿರುವ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಕತಾರ್ ಕೂಡ ಒಂದು.

ಸಂಪೂರ್ಣ ರಾಜಪ್ರಭುತ್ವ, ರಾಜನೇ ಬಾಸ್
ಹೌದು ಕತಾರ್ ನಲ್ಲಿ ಸಂಪೂರ್ಣ ರಾಜಪ್ರಭುತ್ವವಿದ್ದು, ತಂದೆ ನಂತರ ಮಗ ಅವನ ನಂತರ ಅವನ ಮಗ ರಾಜನಾಗುತ್ತಾನೆ. ರಾಜನನ್ನ ಎಮಿರ್ ಅಂತಾ ಕರೆಯಲಾಗುತ್ತೆ. ಇವರೆ ದೇಶದ ಕಮಾಂಡರ್ ಇನ್ ಚೀಫ್ ಆಗಿರುತ್ತಾರೆ.19ನೇ ಶತಮಾನ ದಿಂದಲೂ ಕತಾರ್ ದೇಶವನ್ನ ಅಲ್ ಥಾಣಿ ವಂಶಸ್ಥರು ಆಳುತ್ತಿದ್ದಾರೆ. ಈಗಿರೋ ಶೇಕ್ ತಮಿಂ ಬಿನ್ ಹಮದ್ ಎಮಿರ್ ಕೂಡ ಇದೇ ವಂಶಸ್ಥರಾಗಿದ್ದಾರೆ. ಇವರು ಹೇಳಿದ್ದೇ ಕಾನೂನಾಗಿ ಜಾರಿಗೆ ಬರುತ್ತೆ.

ದೊಡ್ಡ ದೊಡ್ಡ ಕಂಪನಿಗಳ ತವರು
ಫ್ರೆಂಡ್ಸ್ ನೀವೆಲ್ಲ ಕತಾರ್ ಏರ್ವೇಸ್, ಅಲ್ ಜಜೀರ ಮಾಧ್ಯಮ ದಂತಹ ದೊಡ್ಡ ದೊಡ್ಡ ಕಂಪನಿಗಳ ಬಗ್ಗೆ ಕೇಳಿರುತ್ತಿರಿ. ಇಂಥ ಕಂಪನಿಗಳ ತವರು ಕಥಾರ್. ಇದಲ್ಲದೆ ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿಯು Volkswagen ಹಾಗೂ Porsche ಯಂಥ ಕಂಪನಿಗಳಲ್ಲಿ ತನ್ನ ಶೇರನ್ನು ಹೊಂದಿದೆ.

ಫಿಫಾ ವರ್ಲ್ಡ್ ಕಪ್ ಆಯೋಜಿಸುತ್ತಿರುವ ಮೊದಲ ಮಿಡಲ್ ಈಸ್ಟ್ ಕಂಟ್ರಿ
ಹೌದು, ಫಿಫಾ ವರ್ಲ್ಡ್ ಕಪ್ ಆಯೋಜನೆ ಮಾಡುತ್ತಿರುವ ಮೊದಲ ಮಧ್ಯಪ್ರಾಚ್ಯ ದೇಶ ಕತಾರ್. 2022ರ ನವೆಂಬರ್ ಡಿಸೆಂಬರ್ ನಲ್ಲಿ ಈ ಫುಟ್ಬಾಲ್ ವಿಶ್ವಕಪ್ ನಡೆಯಲಿದೆ. ಆದ್ರೆ ಸೌದಿ ಅರೇಬಿಯಾ, ಯುಎಇ ಹಾಗೂ ಬಹರೆನ್ ಜೊತೆ ರಾಜತಾಂತ್ರಿಕ ಸಂಬಂಧ ಕಟ್ ಆಗಿರುವುದು ಫಿಫಾ ವರ್ಲ್ಡ್ ಕಪ್ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಈಗಾಗಲೇ ಹಲವು ದೇಶಗಳು ಕತಾರ್ ನಲ್ಲಿ ವಿಶ್ವ ಕಪ್ ನಡೆಯುತ್ತಿರುವುದಕ್ಕೆ ಅಪಸ್ವರ ಎತ್ತಿವೆ.

ಕೆಲಸಕ್ಕೆ ಬಂದ ವಿದೇಶಿಗರಿಗೆ ಟಾರ್ಚರ್
ಯೆಸ್ ಫ್ರೆಂಡ್ಸ್, ಹೆಚ್ಚು ಹೆಚ್ಚು ವಿದೇಶಿಗರಿಗೆ ಕೆಲಸಕೊಟ್ಟು ಆಶ್ರಯ ನೀಡಿರುವ ಕತಾರ್ ನಲ್ಲಿ ಅದೆ ಕೆಲಸಗಾರರನ್ನು ಜೀತದಾಳುಗಳಂತೆ ನೋಡುತ್ತಾರೆ ಅನ್ನೋ ಆರೋಪ ಹಲವು ವರ್ಷಗಳಿಂದ ಕೇಳಿ ಬಂದಿದೆ. ಸಾಕಷ್ಟು ಕಾರ್ಮಿಕರಿಗೆ ಹಲವು ತಿಂಗಳುಗಳ ಸ್ಯಾಲರಿ ಕೊಟ್ಟಿಲ್ಲ, ಇನ್ನು ಕೆಲವರ ಪಾಸ್​​​ಪೋರ್ಟ್​​​ಗಳನ್ನು ಕಿತ್ತುಕೊಂಡಿದ್ದಾರೆ ಅನ್ನೋ ಆರೋಪಗಳಿವೆ. ಅದರಲ್ಲೂ ಫಿಫಾ ವರ್ಲ್ಡ್ ಕಪ್ ಕಾಮಗಾರಿಯಲ್ಲಿ ತೊಡಗಿರೋ ಕಾರ್ಮಿಕರಿಗೆ ಟಾರ್ಚರ್ ನೀಡಲಾಗುತ್ತಿದೆ ಅಂತ ಮಾನವ ಹಕ್ಕುಗಳ ಆಯೋಗಗಳು ಆರೋಪಿಸುತ್ತಿವೆ.

ಕತಾರ್ ಮೇಲೆ ನೆರೆಹೊರೆಯ ದೇಶಗಳ ನಿರ್ಬಂಧ
ಫ್ರೆಂಡ್ಸ್ ವಿಶ್ವದ ಶ್ರೀಮಂತ ದೇಶವಾದ ಕತಾರ್ ಮೇಲೆ ಸೌದಿ ಆರೇಬಿಯಾ, ಅರಬ್‌ ಸಂಯುಕ್ತ ಸಂಸ್ಥಾನ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್, ಬಹರೇನ್‌ ಮುಂತಾದ ದೇಶಗಳು ನಿರ್ಬಂಧ ಹೇರಿವೆ. ಇದಕ್ಕೆ ಕಾರಣ ಭಯೋತ್ಪಾದನೆಗೆ ಕತಾರ್ ಬೆಂಬಲ ನೀಡುತ್ತಿದೆ ಅನ್ನೋ ವಿಚಾರ. ಇದೇ ಕಾರಣಕ್ಕೆ ದಿಗ್ಬಂಧನ ಹೇರಿರುವ ದೇಶಗಳು ಕತಾರ್‌ ಜೊತೆಗೆ ಜಲ, ವಾಯು ಮತ್ತು ಭೂಮಾರ್ಗದ ಎಲ್ಲ ಸಂಪರ್ಕಗಳನ್ನ ಸ್ಥಗಿತಗೊಳಿಸಿವೆ.

ಕತಾರ್ ಮತ್ತು ಅಮೆರಿಕ ನಡುವಿನ ಸಂಬಂಧ
ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹೊಂದಿರುವ ಅತ್ಯಂತ ದೊಡ್ಡ ಸೇನಾ ನೆಲೆ ಕತಾರ್‌ನಲ್ಲಿದೆ. ಅಮೆರಿಕದ ಶಸ್ತ್ರಾಸ್ತ್ರಗಳಿಗೆ ಪ್ರಮುಖ ಕತಾರ್ ಪ್ರಮುಖ ಮಾರುಕಟ್ಟೆ. ಎರಡು ದೇಶಗಳು 1992 ರಲ್ಲಿ ರಕ್ಷಣಾ ಒಪ್ಪಂದ ಮಾಡಿಕೊಂಡಿವೆ. ಕತಾರ್‌ ಸರ್ಕಾರ ಮಾಲೀಕತ್ವದ ಅಲ್‌ ಜಝೀರಾ ಸುದ್ದಿ ವಾಹಿನಿ ಮಧ್ಯಪ್ರಾಚ್ಯದ ಉಗ್ರಗಾಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಹಾಗೆ ಕತಾರ್ ಸರ್ಕಾರ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ ಅನ್ನೋ ಅಸಮಾಧಾನ ಅಮೆರಿಕ ಹೊಂದಿದೆ.

ಫ್ರೆಂಡ್ಸ್ ಇದಿಷ್ಟು ಜಗತ್ತಿನ ಅತ್ಯಂತ ಶ್ರೀಮಂತ ದೇಶ ಕತಾರ್ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ಮಾಹಿತಿ. ಈ ಬಗ್ಗೆ ನಿಮಗೆ ಏನ್ ಅನ್ಸುತ್ತೆ ಅಂತ ಕಾಮೆಂಟ್ ಮಾಡಿ ತಿಳಿಸಿ.

Contact Us for Advertisement

Leave a Reply