ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಮತ್ತೆ ವಿಸ್ತರಣೆ

masthmagaa.com:

ದೆಹಲಿ: ಅಂತಾರಾಷ್ಟ್ರೀಯ ಪ್ಯಾಸೆಂಜರ್ ವಿಮಾನಗಳ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ಮಾರ್ಚ್​​ 31ರವರೆಗೂ ಮುಂದುವರಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ನಿರ್ಧರಿಸಿದೆ. ಅದರಂತೆ ಈಗಾಗಲೇ ಮಾರ್ಚ್​ 31ರ ಮಧ್ಯರಾತ್ರಿವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಯಾನ ಸೇವೆ ಲಭ್ಯವಿರೋದಿಲ್ಲ ಅಂತ ಪ್ರಕಟಣೆ ಹೊರಡಿಸಿದೆ.

ಆದ್ರೆ ಈ ನಿರ್ಬಂಧ ಆಲ್​​​-ಕಾರ್ಗೋ ವಿಮಾನಗಳು ಮತ್ತು ಡಿಜಿಸಿಎಯಿಂದ ಅನುಮತಿ ಪಡೆದ ವಿಮಾನಗಳಿಗೆ ಅನ್ವಯವಾಗೋದಿಲ್ಲ ಅಂತ ಕೂಡ ಪ್ರಕಟಣೆಯಲ್ಲಿ ತಿಳಿಸಿದೆ. ಆಲ್ ಕಾರ್ಗೋ ಆಪರೇಷನ್ಸ್​​ ಅಂದ್ರೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಅಗತ್ಯ ವಸ್ತುಗಳ ಸಾಗಾಟ, ಬೇರೆ ದೇಶದಲ್ಲಿ ಸಿಲುಕಿರೋರನ್ನು ಕರೆತರುವಂತಹ ಕಾರ್ಯಾಚರಣೆಗಳಾಗಿವೆ..

ಕಳೆದ ವರ್ಷ ಕೊರೋನಾ ಹಾವಳಿ ಶುರುವಾಗ್ತಿದ್ದಂತೆ ಆರ್ಥಿಕತೆಯ ವಿವಿಧ ವಲಯದ ಮೇಲೆ ನಿರ್ಬಂಧಗಳನ್ನು ಹೇರಲಾಗಿತ್ತು. ಅದರಂತೆ ಮಾರ್ಚ್​ 31ರಂದು ಅಂತಾರಾಷ್ಟ್ರೀಯ ವಿಮಾನಯಾನದ ಮೇಲೆ ನಿರ್ಬಂಧ ವಿಧಿಸಿತ್ತು. ನಂತರದಲ್ಲಿ ದೇಶದೊಳಗೆ ವಿಮಾನಯಾನಕ್ಕೆ ಅವಕಾಶ ನೀಡಿದ್ರೂ ಕೂಡ ಅಂತಾರಾಷ್ಟ್ರೀಯ ವಿಮಾನಯಾನದ ಮೇಲಿನ ನಿರ್ಬಂಧವನ್ನು ಇನ್ನೂ ಕೂಡ ಮುಂದುವರಿಸಲಾಗಿದೆ.

-masthmagaa.com

Contact Us for Advertisement

Leave a Reply